M.K.Somashekar

M.K.Somashekar

Share

Photos from M.K.Somashekar's post 20/04/2026

ಸಮಸಮಾಜದ ಪರಿಕಲ್ಪನೆ ಸಮಾಜಕ್ಕೆ ಬಿತ್ತಿದವರು ಬಸವಣ್ಣ - ಎಂ ಕೆ ಸೋಮಶೇಖರ್.

ಕಾಯಕಯೋಗಿ ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯ ಹಿನ್ನೆಲೆಯಲ್ಲಿ ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದ ಬಳಿಯ ಬಿಂದ್ಯಾ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಶಿವಕುಮಾರಸ್ವಾಮಿ (ಬೆಳ್ಳಿಯಪ್ಪ)ರವರ ಸ್ನೇಹ ಬಳಗದ ವತಿಯಿಂದ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೌರಕಾರ್ಮಿಕರಿಗೆ ಸೀರೆ ವಿತರಿಸಿ ಮತ್ತು ಸಾರ್ವಜನಿಕರಿಗೆ ಮಜ್ಜಿಗೆ,ಪಾನಕ, ಕೋಸಂಬರಿ ವಿತರಿಸಿ ವಿಶಿಷ್ಟವಾಗಿ ಬಸವಜಯಂತಿ ಆಚರಿಸಲಾಯಿತು.ಈ ವೇಳೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ.ಕೆ ಸೋಮಶೇಖರ್,ಕೆಪಿಸಿಸಿ ಸದಸ್ಯರಾದ ಶ್ರೀನಾಥ್ ಬಾಬು, ಕಾಂಗ್ರೆಸ್ ಮುಖಂಡರಾದ ಹರೀಶ್,ಬೆಲ್ಲದ ರಾಜಣ್ಣ,ದಿನೇಶ್, ಕುಮಾರಸ್ವಾಮಿ (ಕುಮ್ಮಿ), ರಾಮಾನುಜ ರಸ್ತೆ ಮಹೇಶ್,ಪವನ್ ಪಟೇಲ್,ಪಾಪು,ಲಿಖಿತ್ ಮತ್ತಿತರರು ಉಪಸ್ಥಿತರಿದ್ದರು.
ಪೌರಕಾರ್ಮಿಕರಿಗೆ ಸೀರೆ ವಿತರಣೆ ಮಾಡಿ ಮಾತನಾಡಿದ ಎಂ.ಕೆ ಸೋಮಶೇಖರ್ ರವರು ೧೨ನೇ ಶತಮಾನದ ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ನೆಲೆಗಟ್ಟಿಗೆ ಅಂದೆ ಬುನಾದಿ ಹಾಕಿದ್ದರು.ಜಾತಿ,ಲಿಂಗ ಮತ್ತು ವರ್ಗ ತಾರತಮ್ಯಗಳನ್ನು ಬಲವಾಗಿ ವಿರೋಧಿಸಿದ್ದ ಅವರು ಸಮ ಸಮಾಜದ ಕನಸುಗಳನ್ನು ಕಂಡಿದ್ದವರು.ಸರಳವಾದ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿ ಬದುಕಿನ ಮೌಲ್ಯಗಳನ್ನು, ಆರೋಗ್ಯಕರ ಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ಮಾಡಿದ್ದರು.ಅವರ ತತ್ವ, ಆದರ್ಶಗಳು ಮನುಕುಲಕ್ಕೆ ಹೊಸ ನಾಂದಿಯಾಗಿದ್ದು ಅವರನ್ನು ಕೇವಲ ಓದದೇ ಅವರ ಚಿಂತನೆಗಳನ್ನು ಅನುಸರಿಸಿದರೆ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನ ವಾಗುವುದಲ್ಲದೆ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ತಿಳಿಸಿದರು.

Want your public figure to be the top-listed Public Figure in Mysore?
Click here to claim your Sponsored Listing.

Category

Address


Mysore