H R Leelavathi

H R Leelavathi

Share

13/06/2026

ನಾದ ಸುಖಕರ : ರಚನೆ - ರಾಘವೇಂದ್ರ ಇಟಗಿ
ಸಂಗೀತ ಸಂಯೋಜನೆ - ಪದ್ಮಚರಣ್
ಮೂಲಗಾಯನ - ಎಚ್ ಆರ್ ಲೀಲಾವತಿ

ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !

ನಾದ ಸುಖಕರ ಪ್ರಿಯ ಸಖ ​
ನುಡಿಸು ವೀಣೆಯ ವೈಣಿಕ ​

ನೋವು ನರಳಿಕೆ ಕೊರಳ ಗಂಟೆಗೆ ​
ಜೀವ ಕೋಟಿಯು ಬೆದರಿದೆ. ​
ನೇಹ ತುಂಬಿದ ನಾದ ಮಂಜುಳ
ಸ್ನೇಹ ಧಾರೆಗೆ ಚದುರಿದ ​
ಪ್ರಾಣ ಶಕ್ತಿಗಳೆಲ್ಲ ಮರಳಲಿ ​
ದಿವ್ಯ ಚೇತನ ದಾಯಕ||_||​

ಕಂಸ ಭೀತಿಯ ಕ್ರೂರ ಚೆರೈಗೆ ​
ಹಿಂಸೆ ಬಡುತಿಹ ಮನುಜನ
ಹೂವ ಹಂಬಲು ಕಮರಿ ಹೋಗಿದೆ ​
ಬಣ್ಣಗೆಟ್ಟಿದೆ ಮಧುವನ ​
ಖುಷಿಯ ಚಿಂತನ ನಿನ್ನ ಗಾಯನ
ಪ್ರಾಣ ತುಂಬಲಿ ವೈಣಿಕ ||_||​

ಕಾಂತಿ ಹೀರಕ ಕರಗಿ ಹರಿಯಿತು
ಗಾನ ವಾಹಿನಿಯಾಗುತ
ಶಾಂತಿದಾಯಕ ಸೂರ್ಯ ಸಂಗಕೆ
ಪ್ರಾಣ ಪ್ರೇಮಿಯು ಬಾಗುತ
ನಂಬಿ ನಿಂತಿರೆ ಗಾನ ಬಂಧುವೆ
ತುಂಬು ನಾದೋನ್ಮಾದಕ ||_||​

Want your public figure to be the top-listed Public Figure in Mysore?
Click here to claim your Sponsored Listing.

Category

Address


Mysore