Pralhad Joshi
ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ಅಭಿವೃದ್ಧಿ ಪಯಣದ ಸಂಕಲ್ಪಕ್ಕೆ ಸಾಕ್ಷಿಯಾಗಿರುವ ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದ ಕ್ಷಣಗಳು
20/06/2026
ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ಅಭಿವೃದ್ಧಿ ಪಯಣದ ಸಂಕಲ್ಪಕ್ಕೆ ಸಾಕ್ಷಿಯಾಗಿರುವ ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಿಸಲಾಯಿತು.
ಖೇಲೋ ಇಂಡಿಯಾ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ₹175.50 ಕೋಟಿ ವೆಚ್ಚದಲ್ಲಿ, 22 ವಿವಿಧ ಕ್ರೀಡೆಗಳಿಗೆ ಅಗತ್ಯವಾದ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ಸೌಲಭ್ಯಗಳನ್ನು ಒಳಗೊಂಡು, 2,200 ಜನರಿಗೆ ಆಸನ ವ್ಯವಸ್ಥೆಯೊಂದಿಗೆ ಒಟ್ಟು 15 ಎಕರೆ ಪ್ರದೇಶದಲ್ಲಿ ಈ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ಶೇ.95 ರಷ್ಟು ಪೂರ್ಣಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಲೋಕಾಪರ್ಣೆಗೊಳ್ಳಲಿದೆ. ಯುವಶಕ್ತಿಗೆ ಉತ್ತೇಜನ ನೀಡುವುದರ ಜೊತೆಗೆ ನಮ್ಮ ಭಾಗದ ಕ್ರೀಡಾ ಬೆಳವಣಿಗೆ ಹಾಗೂ ಸಮಗ್ರ ಅಭಿವೃದ್ಧಿಗೆ ಹೊಸ ವೇಗವನ್ನು ಈ ನೂತನ ಕ್ರೀಡಾಂಗಣ ನೀಡಲಿದೆ.
ಕ್ರೀಡಾ ಕ್ಷೇತ್ರದ ಬಲವರ್ಧನೆ ಹಾಗೂ ವಿಶ್ವಮಟ್ಟದ ಸೌಲಭ್ಯಗಳ ನಿರ್ಮಾಣದ ಮೂಲಕ ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ದಿಸೆಯಲ್ಲಿ ಈ ಕ್ರೀಡಾ ಸಂಕೀರ್ಣ ಮಹತ್ವದ ಪಾತ್ರ ವಹಿಸಲಿದೆ.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಮಹೇಶ್ ಟೆಂಗಿನಕಾಯಿ Mahesh Tenginkai , ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ್ , ಉಪಮಹಾಪೌರರಾದ ಶ್ರೀ ಸಂತೋಷ್ ಚವಾಣ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ ಸೇರಿದಂತೆ ಪಾಲಿಕೆ ಸದಸ್ಯರು, ಗಣ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
20/06/2026
ಹಸಿವಿಗೆಲ್ಲಿಂದ ಬಂತು ಜಾತಿ?
ಕೇಂದ್ರ ಸರ್ಕಾರದ 'ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ'ಯಡಿ ಬಡವರಿಗೆ ಸಿಗಬೇಕಾದ ರೇಷನ್ ಪಡೆಯಲು 'ಜಾತಿ ಪ್ರಮಾಣ ಪತ್ರ'ವನ್ನು ರಾಜ್ಯ ಸರ್ಕಾರ ಯಾರನ್ನು ಕೇಳಿ ಕಡ್ಡಾಯ ಮಾಡಿದೆ?
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಆಹಾರ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಬದುಕುವ ಮೂಲಭೂತ ಹಕ್ಕು ಎಂದು ಕೇವಲ 'ಆರ್ಥಿಕ ಸ್ಥಿತಿ' ಮಾನದಂಡವಾಗಿಸಿ ಪಡಿತರ ನೀಡುತ್ತಿದೆ.
ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಲಿಂಕ್ ಮಾಡಿದ ಬಳಿಕವೂ, ರಾಜ್ಯ ಸರ್ಕಾರ ಬಡ ಮತ್ತು ಶೋಷಿತ ವರ್ಗದ ಜನರನ್ನು ಪ್ರತಿ ತಿಂಗಳು ಜಾತಿ ಪತ್ರ ಹಿಡಿದು ಅಲೆಯುವಂತೆ ಕಾಡಿಸುತ್ತಿರುವುದು ಯಾರ ಖುಷಿಗಾಗಿ?
'ಒನ್ ನೇಷನ್, ಒನ್ ರೇಷನ್' ಕಾರ್ಡ್ ಮೂಲಕ ದೇಶದ ಯಾವುದೇ ಮೂಲೆಯಲ್ಲಿ ಬಡವರು ಪಡಿತರ ಪಡೆಯಬಹುದು ಎನ್ನುವ ನಿಯಮವಿರುವಾಗ, ಸ್ಥಳೀಯವಾಗಿ ಇಂತಹ ತುಘಲಕ್ ನಿಯಮಗಳನ್ನು ಹೇರುತ್ತಿರುವುದು ಯಾರನ್ನು ಓಲೈಸಲು?
ಬಡವರ ತಟ್ಟೆಗೆ ಸೇರಬೇಕಾದ ಅನ್ನವನ್ನು ತಡೆಯಲು ಇಂತಹ ಕಾನೂನುಬಾಹಿರ ನೋಟೀಸ್‌ಗಳಿಗೆ ಯಾವುದೇ ಅಧಿಕಾರವಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ನನ್ನ ಕಾರ್ಯಾಲಯಕ್ಕೆ ಸೂಚನೆಯನ್ನು ನೀಡಿದ್ದೇನೆ.
How does caste have anything to do with hunger?
Under the Central Government’s Pradhan Mantri Garib Kalyan Anna Yojana (PMGKAY), who authorized the Karnataka Government to make a caste certificate mandatory for poor beneficiaries to receive ration?
Under the leadership of Prime Minister Narendra Modii, our government firmly believes that access to food is a fundamental right of every citizen. Ration benefits are provided solely on the basis of economic need, not caste.
Even after ration cards have been linked with Aadhaar and biometric authentication systems are in place, why is the State Government forcing poor and marginalized citizens to run from office to office every month carrying caste certificates? Whose interests does this serve?
When the ‘One Nation, One Ration Card’ scheme enables beneficiaries to access their ration anywhere in the country, why are such arbitrary and unnecessary local conditions being imposed? Who is being appeased through these measures?
No authority has the right to issue unlawful notices that obstruct food grains from reaching the plates of the poor. I have directed my office to seek complete details on this matter and ensure that the rights of beneficiaries are protected.
20/06/2026
ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಕರುಣಿಸಿ ಜನಸೇವೆ ಮಾಡಲು ಇನ್ನು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ
Warm birthday wishes to the Hon’ble President of India, Smt. Droupadi Murmu Ji.
Her inspiring journey, dignified leadership and unwavering commitment to the nation continue to motivate millions across the country. Her deep connect with the people reflects the true spirit of India’s democracy and inclusiveness.
Wishing her good health, happiness and continued strength in service to the nation.
President of India
19/06/2026
ಬಿಜಾಪುರ, ಗದಗ ಬೈ ಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಜನರ ಬಹು ವರ್ಷಗಳ ಬೇಡಿಕೆಯ ಹಿನ್ನೆಲೆಯಲ್ಲಿ, ರೈಲು ಸಂಖ್ಯೆ16535 ಮೈಸೂರು - ಪಂಡರಾಪುರ ಹಾಗೂ ರೈಲು ಸಂಖ್ಯೆ 16536 ಪಂಡರಾಪುರ - ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಗೋಲ್ ಗುಂಬಜ್ ರೈಲು ಸಂಚಾರವನ್ನು ಗದಗ ಬೈ ಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಮೂಲಕ ಸಂಚರಿಸುವಂತೆ ಬಿಜಾಪುರದ ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದರಾದ ಶ್ರೀ ಪಿಸಿ ಗದ್ದಿಗೌಡರ್ ರವರು ವಿನಂತಿಸಿದ್ದರು
ಈ ಬೇಡಿಕೆಯನ್ನು ಪುರಸ್ಕರಿಸುವಂತೆ ನಾನು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಕೋರಿದ್ದೆನು. ಈ ಮನವಿಗೆ ಸ್ಪಂದಿಸಿ, ಮೈಸೂರು - ಬೆಂಗಳೂರು - ಪಂಡರಾಪುರ (ಮಹಾರಾಷ್ಟ್ರ) ಗೋಲ್ ಗುಂಬಜ್ ರೈಲು ಗದಗ ಹಾಗೂ ಹುಬ್ಬಳ್ಳಿ ನಿಲ್ದಾಣದ ಬದಲಾಗಿ, ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣದ ಮೂಲಕ ಮುಂಗಡ ರೈಲ್ವೆ ಕಾಯ್ದಿರಿಸಿದ (Advance Reserv Period) ದಿನಾಂಕಗಳ ಬಳಿಕ ನೂತನ ರೈಲ್ವೆ ಮಾರ್ಗದ ಮೂಲಕ ಸಂಚರಿಸಲಿದ್ದು.
ಈ ಮನವಿಯನ್ನು ಪುರಸ್ಕರಿಸಿ, ರೈಲ್ವೆ ಮಾರ್ಗ ಬದಲಿಸಿ, ಸಾವಿರಾರು ಜನರಿಗೆ ಸುಲಭ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ Narendra Modi , ಕೇಂದ್ರ ರೈಲ್ಚೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ Ashwini Vaishnaw ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ ಸೋಮಣ್ಣನವರಿಗೆ V Somanna ಅನಂತ ಧನ್ಯವಾದಗಳು.
Click here to claim your Sponsored Listing.
Category
Contact the public figure
Website
Address
Chittaguppi Hospital Compound, Near HDMC
Hubli
580020