Nagappa Ramesh

Nagappa Ramesh

Share

Photos from Nagappa Ramesh's post 03/07/2025

ಶ್ರೀ ಹಾಸನಾಂಬ ಜಾತ್ರಾ ಹಿತ ರಕ್ಷಣಾ ಸಮಿತಿ ವತಿಯಿಂದ ಶ್ರೀ ಹಾಸನಾಂಬ ದೇವಿ ಜಾತ್ರಾ ಸಮಯದಲ್ಲಿ ಎಲ್ಲ ಭಕ್ತರಿಗೂ ಸುಗಮ ಹಾಗೂ ಶೀಘ್ರವಾಗಿ ಶ್ರೀ ಹಾಸನಾಂಬೆ ದೇವಿಯ ದರ್ಶನ ಸಿಗಲೆಂಬ ಉದ್ದೇಶದೊಂದಿಗೆ, ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಪೂರಕವಾಗಿ ವಿಐಪಿ ದರ್ಶನವನ್ನು ಎರಡು ದಿನಗಳಿಗೆ ಸೀಮಿತಗೊಳಿಸುವುದು, ವಿಐಪಿ ಪಾಸುಗಳ ವಿತರಣೆ ನಿಲ್ಲಿಸುವುದು ಹಾಗೂ ಇನ್ನಿತರ ಬೇಡಿಕೆಗಳ ಮನವಿ ಪತ್ರವನ್ನು ಸನ್ಮಾನ್ಯ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು. ಶೀಘ್ರವೇ ತತ್ಸಂಬಧ ಸಭೆಯನ್ನು ಕರೆಯುವುದಾಗಿ ಸನ್ಮಾನ್ಯ ಜಿಲ್ಲಾಧಿಕಾರಿಗಳು ಆಶ್ವಾಸನೆ ನೀಡಿದರು.

*ಮನವಿ ಪತ್ರದ ಸಾರಾಂಶ*

*1) ವಿಐಪಿ ದರ್ಶನ/ ಶಿಷ್ಟಾಚಾರ ದರ್ಶನ ಎರಡು ದಿನಕ್ಕೆ ಮಾತ್ರ ಸೀಮಿತಗೊಳಿಸಬೇಕು ಉಳಿದ ದಿನಗಳಲ್ಲಿ ಕಡ್ಡಾಯವಾಗಿ ವಿಐಪಿ ದರ್ಶನ (ಶಿಷ್ಟಾಚಾರ ದರ್ಶನ) ನಿಷೇಧಿಸಬೇಕೆಂದು ಮನವಿ (“No VIP Day”)*

2) *ವಿಐಪಿ /ಶಿಷ್ಟಾಚಾರ ದರ್ಶನ ಇದಕ್ಕೆ ಅರ್ಹರಿರುವ ವ್ಯಕ್ತಿಗಳ ಅಥವಾ ಅರ್ಹತೆ ಬರುವ ಮಾನದಂಡಗಳನ್ನು ಪ್ರಕಟಿಸಲು ವಿನಂತಿ* .

3) *ಶ್ರೀ ಹಾಸನಾಂಬೆ ದೇವಿಯ/ ಗರ್ಭಗುಡಿಯಲ್ಲಿ ವಿಐಪಿ ಗಳ ಫೋಟೋ ತೆಗೆಯುವುದು ಸಂಪೂರ್ಣವಾಗಿ ನಿಷೇಧಿಸಲು ಮನವಿ.* ಸರ್ಕಾರ ದೇವಿ ಫೋಟೋವನ್ನು ತೆಗೆಯಬಾರದೆಂದು ಸೂಚನಾ ಫಲಕಗಳನ್ನು ಜಾತ್ರಾ ಮಹೋತ್ಸವ ಪ್ರಕಟಣೆಗಳಲ್ಲಿ ತಿಳಿಸಲಿ, ಹಾಗೆಯೇ ಸರ್ಕಾರದ ಜಾಹೀರಾತುಗಳಲ್ಲಿ ದೇವಿಯ ಫೋಟೂ ಬಳಕೆ ನಿಷೇಧಿಸಲು ಮನವಿ.
ಶ್ರೀ ಹಾಸನಾಂಬೆ ದೇವಿಯು ದೇಶದಲ್ಲೇ ಒಂದು ವಿಶೇಷವಾದ ಶಕ್ತಿ ಸ್ಥಳ. ವರ್ಷದಲ್ಲಿ ಕೆಲವೇ ದಿನ ಬಾಗಿಲು ತೆಗೆದು ದರ್ಶನ ನೀಡುವ ದೇವಿಯ ಫೋಟೋವನ್ನು ಹಾಕುವುದು/ ಪೂಜಿಸುವ ಪದ್ಧತಿ ಇಲ್ಲ. ದೇವಿಯು ಕೇವಲ ನಿರ್ದಿಷ್ಟ ಸಮಯ ಮಾತ್ರ ದರ್ಶನ ನೀಡಲು ಇಚ್ಛೆ ಪಡುತ್ತಾಳೆ. ಬೇರೆ ಸಮಯದಲ್ಲಿ ಆಕೆ ದರ್ಶನ ನೀಡುವುದಿಲ್ಲ. ಹೀಗಿರುವಾಗ ದೇವಿಯ ಫೋಟೋವನ್ನು ಫ್ಲೆಕ್ಸ್ ಗಳಲ್ಲಿ ಪತ್ರಿಕೆಗಳಲ್ಲಿ ಟಿವಿ ಗಳಲ್ಲಿ ಹಾಕುವುದು ಇನ್ನು ಮುಂದಾದರೂ ನಿಲ್ಲಲಿ. ಸರ್ಕಾರಗಳು ದೇವಿಯ ಫೋಟೋವನ್ನು ತೆಗೆಯಬಾರದೆಂದು ಸೂಚನಾ ಫಲಕಗಳನ್ನು ಜಾತ್ರಾ ಮಹೋತ್ಸವ ಪ್ರಕಟಣೆಗಳಲ್ಲಿ ತಿಳಿಸಲು ಮನವಿ.

*4) ವಿ ಐ ಪಿ ಪಾಸುಗಳ ವಿತರಣೆ ನಿಷೇಧಿಸಿದ ಜಿಲ್ಲಾ ಆಡಳಿತದ ಕ್ರಮ ಸ್ವಾಗತಾರ್ಹ.* ಜಾತ್ರಾ ಸಮಯದಲ್ಲಿ ಒತ್ತಡಗಳಿಗೆ ಮಡಿದು ವಿಐಪಿ ಪಾಸ್ ಪುನರ್ ಪ್ರಾರಂಭ ಮಾಡಬಾರದೆಂದು ವಿನಂತಿ
*5) ಶ್ರೀ ಸಿದ್ಧೇಶ್ವರ ದೇವಾಲಯದ ಪ್ರಾಂಗಣದಲ್ಲಿ ಫ್ಲೆಕ್ಸ್ ಅಳವಡಿಸಿ ಪತ್ರಿಕಾಗೋಷ್ಠಿ ಅಥವಾ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಸಮಾರಂಭಗಳನ್ನ ನಿಷೇಧಿಸಲು ಮನವಿ*

6) ಶ್ರೀ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ, ಸರದಿ ಸಾಲಿನಲ್ಲಿ ನಿಂತವರಿಗೆ *ಹಣೆಯಲ್ಲಿ ಕುಂಕುಮ ಇಡಲು ಕಪ್ಪು ಗಳಲ್ಲಿ ಕುಂಕುಮವನ್ನು ಸರತಿ ಸಾಲಿನ ಬಳಿ ಇಡಲು ಹಾಗೂ ಭಕ್ತಾದಿಗಳಿಗೆ ದರ್ಶನದ ನಂತರ ಅರಿಶಿನ ಕುಂಕುಮ / ಹೂಗಳ ಪ್ರಸಾದ ವಿತರಿಸುವ ವ್ಯವಸ್ಥೆ* ಯನ್ನು ಸಂಘ-ಸಂಸ್ಥೆಗಳಿಗೆ/ ಸ್ವಯಂ ಸೇವಕರಿಗೆ ವಹಿಸಿ ಕೊಡಲು ಮನವಿ.

*7) ಶ್ರೀ ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಮನವಿ*

*8) ಶ್ರೀ ಹಾಸನಾಂಬೆ ದೇವಿಯ ಪ್ರಾಂಗಣದಲ್ಲಿರುವ ಪರಿವಾರ ದೇವತೆಗಳ ( “ಶಿವನ 108 ಲಿಂಗ ದೇವಾಲಯ” “ಶ್ರೀ ವೀರಭದ್ರ ದೇವಾಲಯ” “ಹಾಲಪ್ಪನವರ ಗದ್ದುಗೆ” ಮತ್ತು “ಕಳ್ಳಪ್ಪನ ಗುಡಿ”) ದೇವಾಲಯ ಮುಂದೆ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲು ಮನವಿ*

9) ದೇವರ ದರ್ಶನ ಸಮಯ ಪ್ರಾಂಗಣದಲ್ಲಿ ದೇವರಿಗೆ ಬೆನ್ನು ತಿರುಗಿಸಿ ನಿಲ್ಲಬೇಕಾದ ದಿಕ್ಕಿನಲ್ಲಿ ಇರುವ *ಬ್ಯಾರಿಕೇಡ್ ಅನ್ನು “ಪೂರ್ವ ಪಶ್ಚಿಮದಿಂದ” “ಉತ್ತರ – ದಕ್ಷಿಣ” ದಿಕ್ಕಿಗೆ ಅಳವಡಿಸುವಂತೆ ಮನವಿ*

*10) ದೇವಾಲಯದ ಮುಂದಿನ ಭಾಗದಲ್ಲಿ(ಪೂರ್ವ ದಿಕ್ಕಿನಲ್ಲಿ) ಅಂಗಡಿಗಳ ಮುಂದೆ ಬ್ಯಾರಿಕೇಡ್ ಗಳನ್ನು 10-12 ಅಡಿ ಜಾಗ ಬಿಟ್ಟು( ಜನದಟ್ಟಣೆ ಕಡಿಮೆಯಾಗುವಂತೆ) ಹಾಕಲು ಮನವಿ.*

*11) ಶ್ರೀ ಹಾಸನಾಂಬೆ ದೇವಾಲಯದ ಮುಂದಿನ ಭಾಗದಲ್ಲಿ ಗಣ್ಯರ ಶಿಷ್ಟಾಚಾರ ಸ್ವಾಗತಿಸುವಿಕೆ ಸಂಪೂರ್ಣವಾಗಿ ನಿಲ್ಲಿಸಲು ಮನವಿ.*

*12)ಶ್ರೀ ಹಾಸನಾಂಬೆ ದೇವಿ ಪೂಜೆಯ ನೇರ ದರ್ಶನವನ್ನು ರಸ್ತೆಯ ಸರ್ಕಲ್ ಗಳಲ್ಲಿ, ಇನ್ನಿತರ ಸ್ಥಳದಲ್ಲಿ LED ಪರದೆಯ ನೇರ ಪ್ರಸಾರ ಮಾಡಿಸಬಾರದೆಂದು (ಈ ಮೊದಲು ಮಾಡುತ್ತಿದ್ದಂತೆ,ಕಳೆದ ವರ್ಷ ಇದನ್ನು ನಿಲ್ಲಿಸಲಾಗಿದೆ) ಮನವಿ*

13) ದೇವಿಯ ದರ್ಶನಕ್ಕೆ ಆಗಮಿಸುವ *ಹಿರಿಯ ನಾಗರಿಕರಿಗೆ ಶೀಘ್ರ ದರ್ಶನದ ವ್ಯವಸ್ತೆಯನ್ನು* ಕಲ್ಪಿಸಲು ಮನವಿ.

14) *ಹಾಸನ ಜಿಲ್ಲೆ ನಿವಾಸಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ* ಕಲ್ಪಿಸಲು ಮನವಿ( ಶ್ರೀ ಹಾಸನಂಬೆ ದೇವಿ ಹಾಸನದ ಅಧಿದೇವತೆ /ಗ್ರಾಮ ದೇವತೆ /ನಾಡ ದೇವತೆ. ನಮ್ಮ ಜಿಲ್ಲೆಯ ಹೆಸರು ಹಾಸನ ಜಿಲ್ಲೆ ಎಂದೇ ಆಗಿರುವುದು. ತಂತ್ರಜ್ಞಾನ ಆಧರಿತ ವ್ಯವಸ್ಥೆ ಮೂಲಕ(ಉದಾಹರಣೆ ಆಧಾರ್) ಹಾಸನ ಜಿಲ್ಲೆಯ ವಾಸಿಗಳಿಗೆ ವಿಶೇಷ ಶೀಘ್ರ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲು ಮನವಿ. ಇತ್ತೀಚಿನ ವರ್ಷಗಳಲ್ಲಿ ವಿಪರೀತ ಜನಜಂಗುಳಿಯಿಂದ ಅನೇಕ ನಗರವಾಸಿಗಳು ದೇವಿಯ ದರ್ಶನ ಪಡೆದುಕೊಳ್ಳುವುದನ್ನೇ ನಿಲ್ಲಿಸಿದ್ದಾರೆ)

15) ದೇವಾಲಯದ ಜಾತ್ರಾ ಮಹೋತ್ಸವದ ಪ್ರಕಟಣೆಯಲ್ಲಿ *ಜಾತ್ರಾ ಮಹೋತ್ಸವದ ಸಂಪೂರ್ಣ ಮಾಹಿತಿ ತಿಳಿಸಲು ಮನವಿ.* (ಕಳೆದ ವರ್ಷ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ ಕೆಂಡೋತ್ಸವ ಮೆರವಣಿಗೆ ಇತ್ಯಾದಿಗಳು ಪಾಂಪ್ಲೆಟ್ ನಲ್ಲಿ ಅದು ಕಂಡು ಬರಲಿಲ್ಲ)

*16) ಶ್ರೀ ಹಾಸನಾಂಬೆ ದೇವಿ ಜಾತ್ರೆ ಆರಂಭಕ್ಕೆ ಮೊದಲು ಭಕ್ತರ ಅನಿಸಿಕೆಗಳು ಅಭಿಪ್ರಾಯ ಸಂಗ್ರಹ* ಪಡೆಯಲು ಮನವಿ

*17) ಶ್ರೀ ಹಾಸನಾಂಬೆ ದೇವಾಲಯ ಹಿಂದುಗಳ ಧಾರ್ಮಿಕ ಕೇಂದ್ರ* : ಹಿಂದುಗಳ ಧಾರ್ಮಿಕ ಪದ್ಧತಿ, ಧರ್ಮ ಜಾಗೃತ , ಧಾರ್ಮಿಕ ಪರಂಪರೆಯ ಶ್ರೇಷ್ಠತೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕೆಲಸ ದೇವಾಲಯದಲ್ಲಿ ಜಾತ್ರಾ ಸಮಯದಲ್ಲಿ ನಡೆಯಬೇಕಿದೆ. ಸಂಘ-ಸಂಸ್ಥೆ, ಮಠ ಮಾನ್ಯ ಗಳು ನಡೆಸಬಹುದು.

*18) ಗರ್ಭಗುಡಿಯ ಒಳಗೆ ಅರ್ಚಕರನ್ನು ಹೊರತುಪಡಿಸಿ, ಎಲ್ಲ ರೀತಿಯ ಸಾರ್ವಜನಿಕರನ್ನು /ವಿಐಪಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಮನವಿ*

19) *ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಿ ಭಯದ ವಾತಾವರಣ ಸೃಷ್ಟಿಸುವುದು ಬೇಡ.* ಸ್ವಯಂಸೇವಕರನ್ನು ನಿಯೋಜಿಸಿ ಭಕ್ತಿಯ ವಾತಾವರಣವನ್ನು ಸೃಷ್ಟಿಸಲು ಮನವಿ

*20) ಕಂದಾಯ ಇಲಾಖೆ/ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಗೋಪುರದ ಮೂಲಕ ತಮಗೆ ಬೇಕಾದವರನ್ನು ದರ್ಶನಕ್ಕೆ ಬಿಡುವುದು ಸಂಪೂರ್ಣ ನಿಷೇಧ ಮಾಡಲು ಮನವಿ* ಹಾಗೂ ಅವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ

*21) ಶ್ರೀ ಹಾಸನಾಂಬೆ ದೇವಾಲಯದ ಕಮಿಟಿ ಪುನರ್ ರಚನೆಮಾಡಲು ಮನವಿ .*

*22) ಶ್ರೀ ಹಾಸನಾಂಬೆ ದೇವಾಲಯದ ಮ್ಯಾನುಯೆಲ್ (ಕೈಪಿಡಿ) ರಚನೆಯಾಗಲಿ* : ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿರುವಂತೆ ಸಂಪೂರ್ಣವಾದ ಪೂಜಾ ಪದ್ಧತಿ, ಆಚರಣೆಗಳು ಆಚಾರ ವಿಚಾರಗಳು ದರ್ಶನ ಸಮಯ, ಉತ್ಸವಗಳು ದರ್ಶನದ ವ್ಯವಸ್ಥೆ, ಸ್ಥಳ ಪುರಾಣ ಇತ್ಯಾದಿಗಳನ್ನು ಒಳಗೊಂಡ ಮ್ಯಾನುಯೆಲ್ (ಕೈಪಿಡಿ) ಮುಂದಿನ ವರ್ಷದ ಜಾತ್ರಾ ಮಹೋತ್ಸವದೂಳಗೆ ಸಾರ್ವಜನಿಕರು, ಆಗಮಿಕರು ಶಾಸ್ತ್ರಜ್ಞರು ಸ್ಥಳೀಯರು, ನಗರದ ಹಿರಿಯರು ಜನಪ್ರತಿನಿಧಿಗಳು ಎಲ್ಲರ ಅಭಿಪ್ರಾಯ ಪಡೆದು ಹೂಸದಾಗಿ ರಚನೆಯಾಗಲಿ.

*23) ಸಂಘ-ಸಂಸ್ಥೆಗಳು ಸ್ವಯಂಸೇವಕರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವ ಕಾರ್ಯ ಸರ್ಕಾರದಿಂದ ಆರಂಭವಾಗಲಿ*

24) ಜಾತ್ರಾ ಸಮಯದಲ್ಲಿ ಅನ್ನದಾನವನ್ನು ಸಂಘ ಸಂಸ್ಥೆಗಳ ಮೂಲಕ ದೊಡ್ಡ ಮಟ್ಟದಲ್ಲಿ ಆಯೋಜಿಸುವ ಬಗ್ಗೆ ಹಾಗೂ ನಡೆಸುವವರಿಗೆ ಸರ್ಕಾರದಿಂದ ಸೂಕ್ತವಾದ ಸೌಲಭ್ಯ ನೀಡಲು ಮನವಿ.

ಪತ್ರವನ್ನು ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರವೇ ಹಾಸನಾಂಬ ಜಾತ್ರೆ ಹಿತರಕ್ಷಣ ಸಮಿತಿ ಸದಸ್ಯರೊಂದಿಗೆ ಸಭೆಯನ್ನು ಕರೆಯುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಸಮಿತಿಯ ಸದಸ್ಯರುಗಳು ಹಾಗೂ ವಿಚಾರವನ್ನು ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ತಿಳಿಸಿದ ಪತ್ರಿಕೆಗಳ ಸಂಪಾದಕರಿಗೂ ಹೃದಯ ತುಂಬಿದ ಧನ್ಯವಾದಗಳು.
ಡಾ ಎನ್ ರಮೇಶ್ ಹಾಸನ

Photos from Nagappa Ramesh's post 11/06/2025

ಹೊಯ್ಸಳರ ನೆನಪುಗಳು

ಹೊಯ್ಸಳ ಶಿಲ್ಪಿಗಳ ಹೆಸರುಗಳ ಸರಣಿ :

ಹೊಯ್ಸಳರ ಮತ್ತೊಬ್ಬ ಮಹಾ ಶಿಲ್ಪಿ "ನಂದಿಯ ಬೈಚೋಜ"

ನುಗ್ಗೆ ಹಳ್ಳಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಶಿಲ್ಪ ಕಲೆಗಳ ಕೆತ್ತನೆಗಳಲ್ಲಿ ವಿಶೇಷತೆಯನ್ನು ಗಮನಿಸಬಹುದು. ದೇವಾಲಯದ ದಕ್ಷಿಣ ದಿಕ್ಕಿನ ವಿಗ್ರಹಗಳನ್ನು ನಂದಿಯ ಬೈಚೋಜ ಹಾಗೂ ಉತ್ತರ ದಿಕ್ಕಿನ ವಿಗ್ರಹಗಳನ್ನು ಮಲ್ಲಿತಂಮ ಮೂಡಿಸಿರುತ್ತಾರೆ. ದಕ್ಷಿಣ ದಿಕ್ಕಿನ ಅತ್ಯಮೋಘವಾದ ಶಿಲ್ಪಗಳ ಕೆಳಗೆ ಬಿರುದುಗಳ ಸಮೇತ ತನ್ನ ಹೆಸರನ್ನು ಶಿಲ್ಪಿ ನಂದಿಯ ಬೈಚೋಜ ಮೂಡಿಸಿದ್ದಾನೆ. ಇದಲ್ಲದೆ ನಾಗಲಪುರದ ಶ್ರೀ ಕೇದಾರೇಶ್ವರ ದೇವಾಲಯದಲ್ಲೂ ಈತನ ಕೆತ್ತನೆಗಳನ್ನು ಕಾಣಬಹುದು.
ಹೊಯ್ಸಳರ ಮಹಾ ಶಿಲ್ಪಿ ಮಲ್ಲಿ ತಂಮನ ಸರಿಸಾಟಿಯಾಗಿ ಅತ್ಯಮೋಘವಾದ ಶಿಲ್ಪ ಕಲಾ ಕೃತಿಗಳನ್ನು ನೀಡಿದ ನಂದಿಯ ಬೈಚೋಜನ ಅಧ್ಭುತ ಕೈಚಳಕದ ಕಾರ್ಯ ಕೇವಲ ನುಗ್ಗೆಹಳ್ಳಿಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಹಾಗೂ ನಾಗಲಾಪುರದ ಕೇದಾರೇಶ್ವರ ದೇವಾಲಯದಲ್ಲಿ ಮಾತ್ರವೇ ಕಂಡುಬರುವುದು ಆಶ್ಚರ್ಯವೇ ಹೌದು. ಇಂತಹ ಮಹಾಶಿಲ್ಪಿಯ ಕೆತ್ತನೆಗಳು ಅಂದಿನ ಕಾಲದ ಬೇರಾವ ದೇವಾಲಯಗಳಲ್ಲಿ ಕಂಡು ಬರದಿರುವುದು ಸಂಶೋಧನಾರ್ಹ.
ನಂದಿಯ ಬೈಚೋಜನ ಕೈಚಳಕದಲ್ಲಿ ಮೂಡಿಬಂದಿರುವ ಅತ್ಯಮೋಘವಾದ ಕೆಲ ಶಿಲ್ಪಕಲಾ ಕೃತಿಗಳು

1) ನೈಜವಾದದ್ದೇನು ಎಂಬಂತೆ ಬಾಸವಾಗುವ ಆದಿಶೇಷನ ಮೇಲೆ ಕುಳಿತಿರುವ ಶ್ರೀ ಅಮರನಾರಾಯಣ/ ಪರವಾಸದೇವ ವಿಗ್ರಹ,ಕೆಳಗಡೆ ಗರುಡ ಪ್ರಹ್ಲಾದ ದೇವತೆಗಳು ಎಡಗಡೆ ದೇವಿ ಕಳಶ ಚಾಮರ. ಪೀಠದಲ್ಲಿ ನಂದಿಯ ಬೈಚೋಜನ ಹೆಸರು
"ಶ್ರೀ ಆದಿಮೂರ್ತಿ ದೇವರನ್ನು ನಂದಿಯ ಬೈಚೋಜ ಮಾಡಿದ ಕಂಡಿರೆ"

2) ಶ್ರೀ ಗೋವರ್ಧನಧಾರಿ ವಿಗ್ರಹ
ತ್ರಿಭಂಗದಲ್ಲಿ ಬಲಗೈನಲ್ಲಿ ಮೇಲೆತ್ತಿರುವ ಗೋವರ್ಧನಗಿರಿ, ಬಲ ಭಾಗದಲ್ಲಿ ಗೋವುಗಳು, ಸ್ತುತಿಸುತ್ತಿರುವ ಋತ್ವಿಜರು ಗೋಪಿಕೆಯರು, ಭಕ್ತಾದಿಗಳು. ಎಡಭಾಗದಲ್ಲಿ ಭಕ್ತಾದಿಗಳು ಗೋಪಿಕೆಯರನ್ನು ಕಾಣಬಹುದು.
ಪೀಠದಲ್ಲಿ ಶಿಲ್ಪಿ ಬಿರುದುಗಳೋಡನೆ ನಂದಿಯ ಬೈಚೋಜನ ಹೆಸರು,
"ಹರಿ ಬಿರಿದ ರೂವಾರಿ ಗಿರಿವಜ್ರದಂಡವಿರಿದ ಪ್ರಸಾದಿ ಮಸ್ತಕ ಶೂ"(ಮೇಲಿನ ಸಾಲು)
"ಲ ರೂವರಿ ಇಯಾ ಬೈಚೋಜ ಮಾಡಿದ ರೂವರ ಶ್ರೀ ಶ್ರೀ ಶ್ರೀ "(ಕೆಳಗಿನ ಸಾಲು)

3) ಅಷ್ಟಭುಜಗಳ ಶ್ರೀ ಉಗ್ರ ನರಸಿಂಹ ವಿಗ್ರಹ. ಕುಳಿತಿರುವ ಬಂಗಿಯಲ್ಲಿ ಉಗ್ರ ನರಸಿಂಹನ
ಅಷ್ಟು ಭುಜಗಳ ಕೆಳಗಿನ ಎರಡು ಕೈಗಳು ಹಿರಣ್ಯಕಶಿಪುವಿನ ತಲೆ ಮತ್ತು ಕಾಲನ್ನು ಹಿಡಿದಿದ್ದರೆ, ಅದರ ಮೇಲಿನ ಎರಡು ಕೈಗಳಲ್ಲಿ ಕರುಳು ಬಗೆಯುತ್ತಿವೆ. ನಂತರದ ಎರಡು ಕೈಗಳು ಚಕ್ರ ಶಂಖವನ್ನು ಹಿಡಿದಿದ್ದರೆ ಇನ್ನುಳಿದ ಎರಡು ಕೈಗಳು, ಬೆರಳಿನ ಮೂಲಕ ಕರುಳನ್ನು ಹಾರ ಮಾಡಿ ಕೊಂಡಿರುವುದನ್ನು ಕಾಣಬಹುದು . ಕೆಳಭಾಗ ಪ್ರಹ್ಲಾದ ದೇವರನ್ನು ಸ್ತುತಿಸುತ್ತಿರುವುದು
ಪೀಠದಲ್ಲಿ ನಂದಿಯ ಬೈಚೋಜನ ಹೆಸರು,
" ರುವಾರಿ ನಂದಿಯ ಬೈಚೋಜ ಮಾಡಿದ "

4) ಶ್ರೀ ತ್ರಿವಿಕ್ರಮ ವಿಗ್ರಹ. ನಿಂತಿರುವ ಬಂಗಿಯಲ್ಲಿ ಎಡಗಾಲನ್ನು ಭೂಮಿಯ ಮೇಲೆ ಭದ್ರವಾಗಿ ಊರಿ ಬಲಗಾಲನ್ನು ಸೊಂಟದ ಮೇಲ್ಭಾಗಕ್ಕೆ ಎತ್ತಿ ಗಂಗೆಯನ್ನು ದಾಟಿಸಿ ಬ್ರಹ್ಮನ ಮೂರ್ತಿಯನ್ನು ಕಾಣಬಹುದು (ಬ್ರಹ್ಮ ಲೋಕದವರೆಗೆ). ಚತುರ್ಭುಜಗಳಲ್ಲಿ ಪದ್ಮ ಗದೆ, ಚಕ್ರ ಮತ್ತು ಶಂಖವನ್ನು ಕಾಣಬಹುದು
ಪೀಠದಲ್ಲಿ ನಂದಿಯ ಬೈಚೋಜನ ಹೆಸರು,
" ರುವಾರಿ ನಂದಿಯ ಬೈಚೋಜ ಮಾಡಿದ ತ್ರಿ ವಿಕ್ರಮ "

ಡಾ ಎನ್ ರಮೇಶ್ ಹಾಸನ

Photos from Nagappa Ramesh's post 02/06/2025

ಹೊಯ್ಸಳರ ನೆನಪುಗಳು
"ಹೊಯ್ಸಳ ಶಿಲ್ಪಿಗಳ ಹೆಸರುಗಳು"

350 ವರ್ಷಗಳ ಕಾಲ ನಾಡನ್ನಾಳಿದ ಹೊಯ್ಸಳರು ಸಾವಿರಾರು ದೇವಾಲಯಗಳನ್ನು ನಮ್ಮ ನಾಡಿಗೆ ನೀಡಿ ಅದರಲ್ಲಿ ಅಡಗಿರುವ ಅತ್ಯದ್ಭುತ ಶಿಲ್ಪಕಲಾ ಕೃತಿಗಳನ್ನು ನಮ್ಮೆಲ್ಲರಿಗೂ ನೀಡಿರುವುದು ಹೊಯ್ಸಳರ ಶಿಲ್ಪಿಗಳು.
ನಿತ್ಯ ಸ್ಮರಣೀಯರಾದ ಹೊಯ್ಸಳರ ಶಿಲ್ಪಿಗಳ ಹೆಸರುಗಳು ಇಂದಿನ ಪೀಳಿಗೆಯ ಜನರಿಗೆ ತಿಳಿಯದೆ ಇರುವುದು ಬಹಳ ಬೇಸರದ ಸಂಗತಿ

ಸಾವಿರಾರು ಶಿಲ್ಪಿಗಳು ತಮ್ಮ ಅದ್ಭುತ ಕೈಚಳಕದಿಂದ ಅತ್ಯಮೋಘ ಕಲಾ ಕೃತಿಗಳನ್ನು ನೀಡಿದರು, ಕೆಲವೇ ಕೆಲವು ಶಿಲ್ಪಿಗಳ ಹೆಸರು ಮಾತ್ರ ಇಂದು ಉಳಿದಿದೆ.

ಹೊಯ್ಸಳರ ಉಚ್ಛ್ರಾಯ ಕಾಲದ " ಮಹಾಶಿಲ್ಪಿ ಮಲ್ಲಿ ತಮ್ಮ" ಅಮೃತಪುರ ಹಾರನಹಳ್ಳಿ ನುಗ್ಗೆಹಳ್ಳಿ ಜಾವಗಲ್ಲು ಸೋಮನಾಥಪುರ ಗೋವಿಂದನಹಳ್ಳಿ ಹೀಗೆ ಅನೇಕ ಕಡೆ ತನ್ನ ಕೊಡುಗೆಯನ್ನು ನೀಡಿದ್ದಾನೆ. ಆತನ ಕೆಲವು ಕಲಾಕೃತಿಗಳ ಪರಿಚಯ.
1)ಶ್ರೀ ಪಂಚಲಿಂಗೇಶ್ವರ ದೇವಾಲಯ ಗೋವಿಂದನಹಳ್ಳಿ
" ಶೈವ ದ್ವಾರಪಾಲಕರು "
2) ಅತ್ಯಮೋಘ ಕಲಾ ಕೃತಿ " ಶ್ರೀ ಶ್ರೀಧರ"
ಶ್ರೀ ಕೇಶವ ದೇವಾಲಯ ಸೋಮನಾಥಪುರ
3) ಶ್ರೀ ಜನಾರ್ಧನ " (ಅಭಯಹಸ್ತ, ಚಕ್ರ,ಶಂಖ ,ಗಧಾ, ಕೆಳಭಾಗ ಅಕ್ಕಪಕ್ಕದಲ್ಲಿ ದೇವಿಯರು)
ಶ್ರೀ ಕೇಶವ ದೇವಾಲಯ ಸೋಮನಾಥಪುರ

ಡಾ ಎನ್ ರಮೇಶ್ ಹಾಸನ

Want your business to be the top-listed Beauty Salon in Hassan?
Click here to claim your Sponsored Listing.

Category

Website

Address


Hassan
573201/573202