Siddhhaa Events
08/03/2020
#ಡೆಡಿಕೇಶನ್_ಡೆಡ್ಲಿ_ಡೆರಿಂಗ್_ಅಂದ್ರೆ_ಇದೇನಾ?
ಈ ಸ್ಟೋರಿ ಓದುವ ಮೊದಲು ಸ್ವಲ್ಪ ಧೈರ್ಯ ಶಾಂತ ಚಿತ್ತ ಅತಿ ಅವಶ್ಯ. ನಿಜ ಘಟನೆಯನ್ನು ನಿಮ್ಮ ಮನ ಮಂದಿರದಲ್ಲಿ ಮೂಡಿಸಿಕೊಳ್ಳುವ ಮುನ್ನ ಈ ದೃಶ್ಯಗಳನ್ನು ಕಲ್ಪಿಸಿಕೊಳ್ಳುವದು ಅತಿ ಮುಖ್ಯ.
ಅನಾಮಿಕನೊಬ್ಬ ಅವಸರದಲ್ಲಿ ಮನೆಯಾಚೆ ಬಂದು ಆ ಕಾಡಂಚಿನ ಗ್ರಾಮದಲ್ಲಿ ಮಹಿಳೆರ್ಯೊವಳು ಹೆರಿಗೆ ನೋವಿನಿಂದ ಒದ್ದಾಡಿ ಜೀವ ಮರಣದ ಮಧ್ಯೆ ಹೋರಾಡುತ್ತಿದ್ದಾಳೆ ಎಂದ. ಈ ವಿಷಯ ತಿಳಿದ ತ ತಕ್ಷಣವೇ ಕಾರ್ಯಪ್ರವತ್ತ೯ಳಾದ ಈ ಮಹಿಳೆ ತನ್ನ ಚಿಕ್ಕ, ಪುಟ್ಟ ಪುಠಾಣಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಸೈಕಲ್ ಸವಾರಿ ಆರಂಭಿಸಿದಳು. ಹತ್ತಾರು ಫರ್ಲಾಂಗ್ ಪಯಣಿಸುತ್ತಿದ್ದಂತೆ ಪ್ರಾಬ್ಲಂ ಆಗಿದ್ದು ಮಲಪ್ರಭಾ ನದಿ. ಛಲಬೀಡದ ಧೀರ ಮಹಿಳೆ ತುಂಬಿದ ನದಿಯನ್ನು ಈಜಿ ಆ ದಡ ಸೇರಿದಳು. ಗರ್ಭಿಣಿ ಮಹಿಳೆ ಜೀವ ಉಳಿಸಿ ಗಂಡು ಮಗುವಿನ ಜನ್ಮ ಸುಗಮಗೊಳಿಸಿದಳು. ಇದೇ ಸಂಧರ್ಭದಲ್ಲಿ ಆ ಕುಗ್ರಾಮದಲ್ಲಿ ಕೊಲೆಯೊಂದು ನಡೆದು ಊರಿಗೆ ಊರೇ ಸ್ಥಬ್ದವಾಗಿತ್ತು. ಧೈರ್ಯವಂತರಿಗೆ ದೇವರೇ ದಾರಿ ತೋರಿಸುತ್ತಾನೆ ಎನ್ನುವ ಹಾಗೆ ಮಹಿಳೆ ಮರಳಿ ಬರುವಾಗ ಮತ್ತೊಂದು ರೋಮಾಂಚಕಾರಿ ಘಟನೆ ಮೈ ನವಿರೇಳಿಸುವಂಥದ್ದು.
ವರುಣನ ವಕ್ರದೃಷ್ಟೀ ಧಾರಾಕಾರ ಮಳೆ ಧರೆಗುರುಳುತ್ತಿತ್ತು. ನಡು ದಾರಿಯಲ್ಲಿ ನರಭಕ್ಷಕ ಕಾಡು ಪ್ರಾಣಿಗಳ ಕಾಟ ಬದುಕುವ ಕಾನ್ಫಿಡೆನ್ಸ್ ಗೆ ಸವಾಲು ಹಾಕಿತ್ತು. ಎಲ್ಲದರಲ್ಲೂ ಯಶಸ್ವಿಯಾಗಿ ಮುಂದೆ ಬಂದು ಮತ್ತೆ ನೀರಿಗೆ ಹಾರಿ ಈಜಿ ದಡ ಸೇರಿದಳು ಮಹಿಳೆ. ಕೆಸರುಗದ್ದೆಗಳಲ್ಲಿ ಸವಾಲಿನ ಸೈಕಲ್ ಸವಾರಿ ಮಾಡಿ ಖಾನಾಪೂರಕ್ಕೆ ಕಾಲಿಟ್ಟಾಗ ಚಂದ್ರನ ಬೆಳದಿಂಗಳ ಬೆಳಕು ಸ್ವಾಗತಕ್ಕೆ ಬಂದಿತ್ತು.ನಂತರ ಅನ್ನ ಬೇಯಿಸಿ ಮಕ್ಕಳಿಗೆ ಬಡಿಸಿದ ಈ ಸ್ಟೋರಿ ಹೇಳುವ ಡಾಕ್ಟರ್ ಅಜ್ಜಿ ಯ ವಯಸ್ಸು ಇಗ ಜಸ್ಟ ___99. ಬೆಳಗಾವಿಯ ಡಾಃ ಇಂದಿರಾಬಾಯಿ ಜೋಶಿ ಪ್ರಸೂತಿ ಗ್ರಹದಲ್ಲಿ 50 ಸಾವಿರಕ್ಕು ಹೆಚ್ಚು ಸರಳ ಸಾಮಾನ್ಯ ಹೆರಿಗೆಗಳಾಗಿವೆ. ಇವರ ಜಿವನ ಶೈಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಪ್ರೇರಣೆಯಲ್ಲವೇ ?
Laxmi Hebbalkar Beautiful Belagavi Belagavi - ಬೆಳಗಾವಿ Ashraya Foundation Belagavi
21/09/2018
LAUGHTER CLUB
Click here to claim your Sponsored Listing.
Category
Contact the business
Telephone
Address
Belgaum
590001