JDS ITWing
Mandya📍
ಜೆಡಿಎಸ್ -ಬಿಜೆಪಿ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ನಾಯಕರಿಗೆ ದೇವೇಗೌಡರ ಮೇಲೆ ಎಲ್ಲಿಲ್ಲದ ಅನುಕಂಪ ಬಂದಿದೆ ಎಂದು ಕಟುಟೀಕೆ
ರಾಜ್ಯಸಭೆಗೆ ಹೋಗಬೇಕೆಂದು ದೇವೇಗೌಡರು ಅರ್ಜಿ ಹಾಕಿರಲಿಲ್ಲ ಎಂದು ಸ್ಪಷ್ಟನೆ
ನಾನೇನು ಹರಿದಿಲ್ಲ, ಸಿಎಂ ನನ್ನ ಬಳಿ ಬಂದು ಏನು ಸಲಹೆ ಕೇಳುತ್ತಾರೆ ಎಂದ ಹೆಚ್ಡಿಕೆ
ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರ ಹೆಚ್ ಡಿ ದೇವೇಗೌಡ H D Devegowda ಮೇಲೆ ಕಾಂಗ್ರೆಸ್ ನಾಯಕರಿಗೆ ಅತಿಯಾದ ಅನುಕಂಪ ಬಂದಿದೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಆ ಪಕ್ಷದ ಅನುಕಂಪದ ಅಸ್ತ್ರ ಪ್ರಯೋಗಿಸುತ್ತಿದೆ ಎಂದು ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ H D Kumaraswamy ಅವರು ಕಟುವಾಗಿ ಟೀಕಿಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ತಗ್ಗಹಳ್ಳಿ ಗ್ರಾಮದಲ್ಲಿ ಸಿಎಸ್ಆರ್ ನಿಧಿ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದರು.
ರಾಜ್ಯಸಭೆ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ದೇವೇಗೌಡರ ಬಗ್ಗೆ ಎಲ್ಲಿಲ್ಲದ ಅನುಕಂಪ ಬಂದಿದೆ. ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಬಿರುಕು ತರಲು ಕಾಂಗ್ರೆಸ್ ವಿಫಲ ಪ್ರಯತ್ನ ನಡೆಸುತ್ತಿದೆ. ರಾಜ್ಯಸಭೆ ಟಿಕೆಟ್‌ಗೆ ದೇವೇಗೌಡರು ಅರ್ಜಿಯೇ ಹಾಕಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ತನ್ನಲ್ಲಿ ಆಗುತ್ತಿರುವ ಬೆಳವಣಿಗೆಗಳು ಮತ್ತು ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್ ಪಕ್ಷವು ದೇವೇಗೌಡರನ್ನು ನೆಪ ಮಾಡಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ ಕೇಂದ್ರ ಸಚಿವರು; ದೇವೇಗೌಡರದು ಹೋರಾಟದ ಬುದಕು. ಅಧಿಕಾರಕ್ಕಾಗಿ ಹಪಾಹಪಿಸಿದವರಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದರು ಅವರು. ಅದೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕಳೆದ ಬಾರಿ ದೇವೇಗೌಡರ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಬೆಂಬಲದ ಬಗ್ಗೆಯೂ ಮಾತನಾಡಿದ ಕುಮಾರಸ್ವಾಮಿ ಅವರು, ಆಗ ದೇವೇಗೌಡರ ವಿರುದ್ಧ ಇನ್ನೊಬ್ಬ ಅಭ್ಯರ್ಥಿ ನಿಲ್ಲುವ ಅವಕಾಶ ಇರಲಿಲ್ಲ. ಆ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವಷ್ಟು ಸಂಖ್ಯಾಬಲ ಇರಲಿಲ್ಲ. ನಮ್ಮ ಪಕ್ಷಕ್ಕೆ ಸಂಖ್ಯಾಬಲ ಇತ್ತು, ಹೀಗಾಗಿ ರಾಜ್ಯಸಭೆಗೆ ದೇವೇಗೌಡರು ಆಯ್ಕೆಯಾದರು. ಅವರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಲಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಒಕ್ಕಲಿಗ ಮುಖ್ಯಮಂತ್ರಿ ಇರಬೇಕಾದರೆ ರಾಜ್ಯಸಭೆ ತಗೊಂಡು ಏನ್ಮಾಡ್ತೀರಾ? ಎರಡು ತಿಂಗಳು ಕಾದು ನೋಡೋಣ, ಅವರೇನು ಮಾಡುತ್ತಾರೆ ಎಂಬುದನ್ನು ಗಮನವಿಟ್ಟು ನೋಡೋಣ ಎಂದ ಸಚಿವರು. ಡಿಕೆಶಿ ಮುಖ್ಯಮಂತ್ರಿ ಆಗುತ್ತಿರುವ ಹಿನ್ನೆಲೆಯಲ್ಲಿ ದೇವೇಗೌಡರ ಮನೆಯಲ್ಲಿ ಸೂತಕ ಆವರಿಸಿದೆ ಎಂದಿದ್ದ ಮಾಜಿ ಮಂತ್ರಿಯೊಬ್ಬರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸ್ಪಷ್ಟವಾಗಿ ನಿರಾಕರಿಸಿದರು.
ನಾನೇನು ಹರಿದಿಲ್ಲ, ಸಿಎಂ ಬಂದು ನನ್ನ ಬಳಿ ಏನು ಸಲಹೆ ಕೇಳುತ್ತಾರೆ?:
ತಮ್ಮ ನಿವಾಸಕ್ಕೆ ರಾಜ್ಯದ ಮುಖ್ಯಮಂತ್ರಿ ಭೇಟಿ ನೀಡುತ್ತಾರಂತಲ್ಲ, ಕುಮಾರಸ್ವಾಮಿ ಅವರ ಸಲಹೆ ಕೇಳುವುದಾಗಿ ಹೇಳಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಕೇಂದ್ರ ಸಚಿವರು, ನಾನೇನು ಸಲಹೆ ನೀಡಲಿ, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿ ಏನು ಹರಿದಿದ್ದಾರೆ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಸಾಕ್ಷಿ ಗುಡ್ಡೇ ಕೇಳುತ್ತಾರೆ. ನಾನೇನು ಹರಿದಿಲ್ಲ, ನನ್ನ ಬಳಿ ಬಂದು ಏನು ಸಲಹೆ ಕೇಳುತ್ತಾರೆ ಅವರು. ಎಲ್ಲವನ್ನು ನಾನು ಬಲ್ಲೆ. ಹಿರಿಯರು ಒಂದು ಮಾತು ಹೇಳಿದ್ದಾರೆ, 'ಅತಿ ವಿನಯಂ ದೂರ್ತ ಲಕ್ಷಣಂ' ಅಂತ. ಆ ಮಾತು ನನಗೆ ಪದೇಪದೇ ನೆನಪಿಗೆ ಬರುತ್ತಿದೆ ಎಂದು ಕುಟುಕಿದರು.
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಪಕ್ಷ ಅಭ್ಯರ್ಥಿ ಹಾಕಿರುವ ವಿಚಾರದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು; ನಮಗೂ ಎರಡು ಮತ ಬೇಕು, ಕಾಂಗ್ರೆಸ್ ಪಕ್ಷಕ್ಕೂ ಎರಡು ಮತ ಬೇಕು. ಇದರಲ್ಲಿ ಯಾವುದೇ ಗೇಮ್ ಪ್ಲಾನ್ ಇಲ್ಲ. ನಾವು ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಮತ ಹಾಕುವಂತೆ ಕೇಳುತ್ತೇವೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಕಾಂಗ್ರೆಸ್ ನವರಿಗೆ ಹಣ ಬಲ, ಅಧಿಕಾರ ಬಲ ಇದೆ. ಮುಂದೆ ನೋಡೋಣ ಏನಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಕೆಆರ್ ಪೇಟೆ ಶಾಸಕ ಮಂಜುನಾಥ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಇನ್ನೂ ಹಲವು ಮುಖಂಡರು ಹಾಜರಿದ್ದರು.
#ಪಂಚರತ್ನ #ಪಂಚರತ್ನ #ಜನತಾದಳಸೆಕ್ಯುಲರ್ #ಜನತಾದಳಸೆಕ್ಯುಲರ್ #ಜನತಾದಳ
02/06/2026
ಕಿರ್ಗಿಜ್ ಗಣರಾಜ್ಯಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ
ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಚಿವರ ಶೃಂಗಕ್ಕೆ ಭಾರತವನ್ನು ಪ್ರತಿನಿಧಿಸಿರುವ ಹೆಚ್.ಡಿ.ಕೆ
ಎಸ್.ಎಂ. ಕೃಷ್ಣ ಅವರ ನಂತರ ಎಸ್‌ಸಿಒ ಶೃಂಗದಲ್ಲಿ ಭಾಗವಹಿಸಿದ ಎರಡನೇ ಕನ್ನಡಿಗ ಹೆಚ್.ಡಿ.ಕೆ
ಜಾಗತಿಕ ವೇದಿಕೆಯಲ್ಲಿ ನರೇಂದ್ರ ಮೋದಿ ಅವರ ಕೈಗಾರಿಕೆ ದೂರದೃಷ್ಟಿ ಬಗ್ಗೆ ಚರ್ಚಿಸಲಿರುವ ಕುಮಾರಸ್ವಾಮಿ
ಕೈಗಾರಿಕಾ ಸಹಕಾರ, ತಂತ್ರಜ್ಞಾನ ಪಾಲುದಾರಿಕೆ ಮತ್ತು ಹೂಡಿಕೆ ಅವಕಾಶಗಳ ಉತ್ತೇಜನೆ ಬಗ್ಗೆ ವಿಸ್ತೃತವಾಗಿ ಚರ್ಚೆ
ಎಸ್‌ಸಿಒ ಪ್ರಧಾನಿಗಳ ಬಲವಾದ ಸಮೃದ್ಧ ಯುರೇಷಿಯಾದ ದೃಷ್ಟಿಕೋನ ಪ್ರತಿಬಿಂಬಿಸುತ್ತದೆ ಎಂದ ಕೇಂದ್ರ ಸಚಿವರು
ನವದೆಹಲಿ / ಬಿಷ್ಕೇಕ್, 2, ಜೂನ್ 2026
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕಿರ್ಗಿಜ್ ಗಣರಾಜ್ಯದಲ್ಲಿ (ಕಿರ್ಗಿಸ್ತಾನ್) ಬುಧವಾರದಿಂದ ಆರಂಭವಾಗಲಿರುವ ನಾಲ್ಕು ದಿನಗಳ ʼಶಾಂಘೈ ಸಹಕಾರ ಸಂಸ್ಥೆʼ (ಎಸ್‌ಸಿಒ)ಯ ವಿವಿಧ ರಾಷ್ಟ್ರಗಳ ಕೈಗಾರಿಕಾ ಸಚಿವರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆ ರಾಷ್ಟ್ರದ ರಾಜಧಾನಿ ಬಿಷ್ಕೇಕ್ ನಗರಕ್ಕೆ ಮಂಗಳವಾರ ಬಂದಿಳಿದರು.
ʼಶಾಂಘೈ ಸಹಕಾರ ಸಂಸ್ಥೆʼ ಜಗತ್ತಿನ ಅತ್ಯಂತ ಪ್ರಭಾವಶಾಲಿ ಪ್ರಾದೇಶಿಕ ಗುಂಪುಗಳಲ್ಲಿ ಒಂದಾಗಿದ್ದು, ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತವನ್ನು ಸಚಿವ ಕುಮಾರಸ್ವಾಮಿ ಅವರು ಶೃಂಗಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಅವರು ವಿದೇಶಾಂಗ ಖಾತೆ ಮಾಜಿ ಸಚಿವರಾಗಿದ್ದ ಎಸ್.ಎಂ. ಕೃಷ್ಣ ಅವರ ನಂತರ ಎಸ್‌ಸಿಒ ಶೃಂಗಸಭೆಯ ಸಚಿವರ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಎರಡನೇ ಪ್ರಮುಖ ಕನ್ನಡಿಗ ನಾಯಕರಾಗಿದ್ದಾರೆ.
ಯುರೇಷಿಯಾ (ಏಷ್ಯಾ-ಯುರೋಪ್) ನಾದ್ಯಂತ ವಿಸ್ತರಿಸುತ್ತಿರುವ ಭಾರತದ ಆರ್ಥಿಕ ಮತ್ತು ಕಾರ್ಯತಂತ್ರದ ಹೆಜ್ಜೆಗುರುತನ್ನು ಗಮನದಲ್ಲಿಟ್ಟುಕೊಂಡು ಸಚಿವರ ಈ ಭೇಟಿ ವಿಶೇಷ ಮಹತ್ವ ಪಡೆದುಕೊಂಡಿದೆ.
ಕೈಗಾರಿಕಾ ಸಚಿವರ ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಸಚಿವ ಕುಮಾರಸ್ವಾಮಿ ಅವರು ಎಸ್‌ಸಿಒ ಸದಸ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಬೆಳವಣಿಗೆ, ತಾಂತ್ರಿಕ ಸಹಯೋಗ, ಸುಸ್ಥಿರ ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳಿಗಾಗಿ ರಾಷ್ಟ್ರದ ದೃಷ್ಟಿಕೋನವನ್ನು ಪ್ರತಿಪಾದಿಸುವರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ:
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿರುವ ಮತ್ತು ಈ ಪ್ರದೇಶದ ವಿಕಸನಗೊಳ್ಳುತ್ತಿರುವ ಕೈಗಾರಿಕಾ ಭೂದೃಶ್ಯದಲ್ಲಿ ತನ್ನನ್ನು ತಾನು ವಿಶ್ವಾಸಾರ್ಹ ಪಾಲುದಾರನಾಗಿರುವ ಸಮಯದಲ್ಲಿ ಈ ಮಹತ್ವದ ಶೃಂಗದಲ್ಲಿ ಸಚಿವ ಕುಮಾರಸ್ವಾಮಿ ಅವರ ಭಾಗವಹಿಸುವಿಕೆಗೆ ಹೆಚ್ಚು ಪ್ರಾಮುಖ್ಯತೆ ಬಂದಿದೆ.
ಶಾಂಘೈ ಸಹಕಾರ ಸಂಸ್ಥೆ ವಿಶ್ವದ ಅತಿದೊಡ್ಡ ಬಹುಪಕ್ಷೀಯ ಗುಂಪುಗಳಲ್ಲಿ ಒಂದಾಗಿದ್ದು, ಯುರೇಷಿಯಾದಾದ್ಯಂತ ಹತ್ತು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ ಮತ್ತು ಜಾಗತಿಕ ಜನಸಂಖ್ಯೆ ಮತ್ತು ಆರ್ಥಿಕತೆಯ ಗಣನೀಯ ಪಾಲು ಹೊಂದಿದೆ. 2017ರಲ್ಲಿ ಎಸ್ʼಸಿಒ (SCO) ನ ಪೂರ್ಣ ಸದಸ್ಯತ್ವ ಪಡೆದ ಭಾರತವು ರಾಜಕೀಯ, ಆರ್ಥಿಕ, ಭದ್ರತೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸಿದೆ.
ಭಾರತಕ್ಕೆ, ಎಸ್ʼಸಿಒ ವೇದಿಕೆಯು ಮಧ್ಯ ಏಷ್ಯಾದ ದೇಶಗಳೊಂದಿಗೆ ಸಹಕಾರವನ್ನು ಮತ್ತಷ್ಟು ಗಾಢವಾಗಿಸಲು, ಆರ್ಥಿಕ ಪಾಲುದಾರಿಕೆಗಳನ್ನು ಬಲಪಡಿಸಲು ಮತ್ತು ಕಾರ್ಯತಂತ್ರದ ಪ್ರಮುಖ ಸಂಪರ್ಕಗಳನ್ನು ಉತ್ತೇಜಿಸಲು ಒಂದು ಅನನ್ಯ ಅವಕಾಶ ಒದಿಗಿಸಿದೆ. ಮಧ್ಯ ಏಷ್ಯಾದ ಹೃದಯ ಭಾಗದಲ್ಲಿರುವ ಮತ್ತು ಚೀನ ಮತ್ತು ವಿಶಾಲ ಮಧ್ಯ ಏಷ್ಯಾ ಪ್ರದೇಶದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಕಿರ್ಗಿಜ್ ಗಣರಾಜ್ಯವು ಭವಿಷ್ಯದ ಕೈಗಾರಿಕಾ ಸಹಕಾರದ ಕುರಿತು ಚರ್ಚೆಗಳಿಗೆ ಸೂಕ್ತ ಸ್ಥಳವಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ:
ಸಚಿವರ ಶೃಂಗವು ಕೈಗಾರಿಕಾ ಸಹಕಾರವನ್ನು ಬಲಪಡಿಸುವುದು, ತಾಂತ್ರಿಕ ಪಾಲುದಾರಿಕೆಗಳನ್ನು ಉತ್ತೇಜಿಸುವುದು, ನಾವೀನ್ಯತೆ-ನೇತೃತ್ವದ ಬೆಳವಣಿಗೆಯನ್ನು ಹೆಚ್ಚಿಸುವುದು ಹಾಗೂ ಸದಸ್ಯ ರಾಷ್ಟ್ರಗಳ ನಡುವೆ ಹೂಡಿಕೆ ಮತ್ತು ಉತ್ಪಾದನಾ ಸಹಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವತ್ತ ಗಮನಹರಿಸುವ ನಿರೀಕ್ಷೆ ಇದೆ. ಕೈಗಾರಿಕಾ ಯೋಜನೆಗಳನ್ನು ಸುಗಮಗೊಳಿಸುವ, ಕೈಗಾರಿಕಾ ವಲಯಗಳ ನಡುವಿನ ಸಹಕಾರವನ್ನು ಸುಧಾರಿಸುವ ಮತ್ತು ಸುಸ್ಥಿರ ಮತ್ತು ಸಂಪನ್ಮೂಲ-ಸಮರ್ಥ ಉತ್ಪಾದನಾ ಪದ್ಧತಿಗಳನ್ನು ಉತ್ತೇಜಿಸುವ ಗುರಿ ಹೊಂದಿರುವ ಕಾರ್ಯವಿಧಾನಗಳನ್ನು ಸಹ ಶೃಂಗಸಭೆಯ ಚರ್ಚೆಗಳು ಒಳಗೊಂಡಿರುತ್ತವೆ.
ಸದಸ್ಯ ರಾಷ್ಟ್ರಗಳಿಗೆ ಸ್ಪಷ್ಟವಾದ ಆರ್ಥಿಕ ಪ್ರಯೋಜನಗಳನ್ನು ಸೃಷ್ಟಿಸುವ, ಪ್ರಾಯೋಗಿಕ ಮತ್ತು ಫಲಿತಾಂಶ ಆಧರಿತ ಸಹಕಾರವನ್ನು ಭಾರತ ಬಲವಾಗಿ ಪ್ರತಿಪಾದಿಸಲಿದೆ. ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾದ ಭಾರತವು ಕೈಗಾರಿಕಾ ಪರಿವರ್ತನೆ, ಡಿಜಿಟಲ್ ನಾವೀನ್ಯತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸುಸ್ಥಿರ ಉತ್ಪಾದನೆಯಲ್ಲಿ ವ್ಯಾಪಕ ಅನುಭವ, ಅವಕಾಶಗಳನ್ನು ಹೊಂದಿದೆ ಎಂಬ ಅಂಶವನ್ನು ಸಚಿವರು ಶೃಂಗದಲ್ಲಿ ಪ್ರತಿಪಾದಿಸುವರು.
ಈ ಚರ್ಚೆಗಳ ಸಮಯದಲ್ಲಿ ಸಚಿವ ಕುಮಾರಸ್ವಾಮಿ ಅವರು; ಭಾರತದ ಬೆಳೆಯುತ್ತಿರುವ ಕೈಗಾರಿಕಾ ಸಾಮರ್ಥ್ಯಗಳು ಮತ್ತು ಜಾಗತಿಕ ಉತ್ಪಾದನೆ ಮತ್ತು ಹೂಡಿಕೆಗೆ ಆದ್ಯತೆಯ ತಾಣವಾಗಿ ಭಾರತವು ಹೊರ ಹೊಮ್ಮುವುದನ್ನು ಎಸ್ʼಸಿಒ ಸದಸ್ಯ ರಾಷ್ಟ್ರಗಳ ಮುಂದೆ ಆಳವಾಗಿ ಪ್ರತಿಪಾದಿಸಲಿದ್ದಾರೆ. ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು, ಮಾಲಿನ್ಯಮುಕ್ತ ಚಲನಶೀಲತೆ ವೇಗಗೊಳಿಸುವುದು ಮತ್ತು ಮುಂದುವರಿದ ಕೈಗಾರಿಕಾ ಪೂರಕ ವ್ಯವಸ್ಥೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಪರಿವರ್ತನಾ ಉಪಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಬೃಹತ್ ಕೈಗಾರಿಕಾ ಸಚಿವಾಲಯವು ಮುಂಚೂಣಿಯಲ್ಲಿದೆ. ಪಿಎಂ ಇ-ಡ್ರೈವ್ (PM E-DRIVE) ಹಾಗೂ ಇನ್ನಿತರ ಪ್ರಮುಖ ಕಾರ್ಯಕ್ರಮಗಳು ಭವಿಷ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಹಸಿರು ತಂತ್ರಜ್ಞಾನಗಳಿಗೆ ಭಾರತದ ಬದ್ಧತೆಗೆ ಸಾಕ್ಷಿಯಾಗಿವೆ ಎಂದು ಅವರು ಹೇಳಿದರು.
ಎಸ್ʼಸಿಒ ಸದಸ್ಯ ರಾಷ್ಟ್ರಗಳ ನಡುವೆ ತಂತ್ರಜ್ಞಾನ ವಿನಿಮಯ, ಕೈಗಾರಿಕಾ ಪಾರ್ಕ್ʼಗಳ ಸ್ಥಾಪನೆ, ನಾವೀನ್ಯತೆ ಪಾಲುದಾರಿಕೆ ಮತ್ತು ಬಲವಾದ ಉತ್ಪಾದನಾ ಸಂಪರ್ಕಗಳ ಮೂಲಕ ಕೈಗಾರಿಕಾ ಸಹಕಾರವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆಯೂ ಶೃಂಗಸಭೆಯಲ್ಲಿ ಚರ್ಚಿಸುವ ನಿರೀಕ್ಷೆ ಇದೆ. ಈ ಚರ್ಚೆಗಳು ಅತ್ಯುತ್ತಮ ಪೂರೈಕೆ ಸರಪಳಿಗಳನ್ನು ರೂಪಿಸುವುದು, ನಾವೀನ್ಯತೆಗೆ ಉತ್ತೇಜನ ನೀಡುವುದು ಮತ್ತು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಕೈಗಾರಿಕಾ ಪಾಲುದಾರಿಕೆಗಳನ್ನು ವಿಸ್ತರಿಸುವ ಭಾರತದ ವಿಶಾಲ ದೃಷ್ಟಿಕೋನದೊಂದಿಗೆ ನಿಕಟವಾಗಿ ಹೊಂದಿಕೆ ಆಗುತ್ತವೆ ಎಂದು ಸಚಿವರು ಆಶಯ ವ್ಯಕ್ತಪಡಿಸಿದ್ದಾರೆ.
ಎಸ್ʼಸಿಒ (SCO) ರಾಷ್ಟ್ರಗಳಲ್ಲಿ ಭಾರತೀಯ ಉತ್ಪಾದಕರು ಮತ್ತು ಉದ್ಯಮಗಳಿಗೆ ಅವಕಾಶಗಳನ್ನು ವಿಸ್ತರಿಸುವುದು ಭಾರತದ ಪ್ರಮುಖ ಆಸಕ್ತಿಯಾಗಿದೆ. ಭಾರತೀಯ ಎಂಜಿನಿಯರಿಂಗ್ ಸರಕುಗಳು, ಯಂತ್ರೋಪಕರಣ, ವಿದ್ಯುತ್ ಉಪಕರಣಗಳು ಮತ್ತು ಕೈಗಾರಿಕಾ ಉತ್ಪನ್ನಗಳು ಈಗಾಗಲೇ ಒಕ್ಕೂಟ ಸದಸ್ಯ ರಾಷ್ಟ್ರಗಳಲ್ಲಿ ಮಾರುಕಟ್ಟೆಗಳನ್ನು ಕಂಡುಕೊಂಡಿರುವುದರಿಂದ, ಈ ವೇದಿಕೆಯು ಆಳವಾದ ವಾಣಿಜ್ಯ ತೊಡಗಿಸಿಕೊಳ್ಳುವಿಕೆ ಮತ್ತು ಕೈಗಾರಿಕಾ ಸಹಯೋಗಕ್ಕೆ ಹೊಸ ಅವಕಾಶಗಳನ್ನು ನೀಡುತ್ತದೆ.
ಮಧ್ಯ ಏಷ್ಯಾ ಮತ್ತು ಯುರೇಷಿಯನ್ ಪ್ರದೇಶದೊಂದಿಗೆ ಭಾರತದ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಾಢವಾದ ಒತ್ತು ನೀಡುವುದನ್ನು ಈ ಭೇಟಿ ಪ್ರತಿಬಿಂಬಿಸುತ್ತದೆ. ಭಾರತವು ಎಸ್ʼಸಿಒ ಚೌಕಟ್ಟಿನೊಳಗೆ ಹೆಚ್ಚು ಸಕ್ರಿಯ ಪಾತ್ರ ವಹಿಸಿದೆ ಹಾಗೂ ಸಂವಾದ, ಆರ್ಥಿಕ ಸಹಕಾರ ಮತ್ತು ಜನಕೇಂದ್ರಿತ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತಿದೆ. ಭಾರತದ ಕೊಡುಗೆಗಳು ಪ್ರಾದೇಶಿಕ ಸ್ಥಿರತೆ, ಸಮೃದ್ಧಿ ಮತ್ತು ಸುಸ್ಥಿರ ಬೆಳವಣಿಗೆಗೆ ಬದ್ಧವಾಗಿರುವ ಜವಾಬ್ದಾರಿಯುತ ಮತ್ತು ರಚನಾತ್ಮಕ ಪಾಲುದಾರನಾಗಿ ತನ್ನ ಸ್ಥಾನವನ್ನು ಬಲಪಡಿಸಿವೆ.
ಸಚಿವರ ಈ ಭೇಟಿಯು ಸಚಿವರ ನಿಯಮಿತ ಭೇಟಿಯನ್ನು ಮೀರಿದ್ದಾಗಿದ್ದು, ಇದು ಉತ್ಪಾದನಾ ಶಕ್ತಿಯಾಗಿ ಭಾರತದ ವಿಶ್ವಾಸ, ಬಹುಪಕ್ಷೀಯ ಸಹಕಾರಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಬಲವಾದ ಕೈಗಾರಿಕಾ ಪಾಲುದಾರಿಕೆಗಳನ್ನು ನಿರ್ಮಿಸುವ ಇಚ್ಛಾಶಕ್ತಿಯನ್ನು ಪ್ರತಿನಿಧಿಸುತ್ತದೆ. ಅತಿ ಮುಖ್ಯವಾಗಿ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ರಾಜ್ಯದ ಮತ್ತೊಬ್ಬ ನಾಯಕರು ಭಾರತದ ದನಿಯನ್ನು ಅತ್ಯಂತ ಪ್ರಭಾವಿ ವೇದಿಕೆಯಾದ ʼಶಾಂಘೈ ಸಹಕಾರ ಸಂಸ್ಥೆʼ (ಎಸ್‌ಸಿಒ) ಯಲ್ಲಿ ಮೊಳಗಿಸಲಿದ್ದಾರೆ.
27/05/2026
ಇಂದು ಬಿಡದಿಯಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ Nikhil Gowda ರವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಬಿಡದಿ ಟೌನ್ ಷಿಪ್ ಯೋಜನೆಯಡಿಯಲ್ಲಿ ರೈತರ ಭೂಮಿಯನ್ನು ಕಬಳಿಸಿ ಡಿನೋಟಿಫೈ ಮಾಡಿರುವ ವಿರುದ್ಧವಾಗಿ ರೈತರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಎ. ಮಂಜಣ್ಣ A Manjunath ರವರು ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಹೆಚ್. ಸಿ. ಜಯಮುತ್ತು ರವರು ಹಾಗೂ ಆನೇಕ ಮುಖಂಡರುಗಳು ರೈತರು ಹಾಜರಿದ್ದರು.
01/01/2026
ಜಿ.ಆರ್. ವರದಯ್ಯ ಕುಮಾರ್, ಜೆಡಿಎಸ್ ಮುಖಂಡರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ಬೆಂಗಳೂರು ಮಹಾನಗರದ ಜನತಾದಳ (ಜಾತ್ಯತೀತ) ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು.
ದೇವರು ನಿಮಗೆ ಆಯುರಾರೋಗ್ಯ ನೀಡಿ ಜನಸೇವೆ ಮಾಡಲು ಇನ್ನೂ ಹೆಚ್ಚಿನ ಚೈತನ್ಯ ನೀಡಲಿ ಎಂದು ಹಾರೈಸುತ್ತೇವೆ.
Nikhil Gowda Bangalore City JDS
28/12/2025
ಜೆಡಿಎಸ್ ಪಕ್ಷಕ್ಕೆ 25 ವರ್ಷಗಳು ತುಂಬಿದ ಕ್ಷಣ, ಪಕ್ಷದ ಕಚೇರಿ ಜೆಪಿ ಭವನದಲ್ಲಿ ರಜತಮಹೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರನ್ನ ಆಹ್ವಾನಿಸಿ, ಸ್ವಾಗತ ಭಾಷಣ ಮಾಡಿದ ಜೆಡಿಎಸ್ ಯುವ ರಾಜ್ಯಾಧ್ಯಕ್ಷರಾದ ಶ್ರೀ Nikhil Gowda ರವರು.
ದೇವೇಗೌಡರು ಅರೋಗ್ಯವಾಗಿದ್ದಾರೆ, ಆತಂಕಪಡಬೇಕಿಲ್ಲ: ಹೆಚ್.ಡಿ. ಕುಮಾರಸ್ವಾಮಿ
H D Kumaraswamy
ಮೂರ್ನಾಲ್ಕು ದಿನದಲ್ಲಿ ಡಿಸ್ಚಾರ್ಜ್ ಆಗ್ತಾರೆ ಎಂದ ಕೇಂದ್ರ ಸಚಿವರು
ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಆರೋಗ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಮೂರು ನಾಲ್ಕು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ತಮ್ಮ ತಂದೆಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಯಾರೂ ಆತಂಕಪಡುವ ಅಗತ್ಯತೆ ಇಲ್ಲ. ತಂದೆಯವರಿಗೆ ಆರೋಗ್ಯದ ಸಮಸ್ಯೆ ಇಲ್ಲ. ಕಳೆದ ಮೂರು ದಿನಗಳಿಂದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದೇವರ ಮತ್ತು ಜನತೆಯ ಆಶೀರ್ವಾದದಿಂದ ಆರೋಗ್ಯವಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
H D Devegowda Nikhil Gowda Janata Dal Secular JDS ITWing Janatadal Secular Jds Karunadu
ಹಾಸನಾಂಬೆ ದೇವಸ್ಥಾನದ ಗರ್ಭ ಗುಡಿಯ ಬಾಗಿಲು ತೆರೆದಿದೆ.
ಕಾಂಗ್ರೆಸ್ ಗಿಡ, ಪಾರ್ಥೇನಿಯಮ್ ವನ್ನು ಬೆಂಗಳೂರಿನ ರಸ್ತೆಯ ಮಧ್ಯವಿರುವ ಗುಂಡಿಗಳಲ್ಲಿ ನೆಟ್ಟು ಜೆಡಿಎಸ್ ನಿಂದ ವಿನೂತನ ಪ್ರತಿಭಟನೆ.
ಬೆಂಗಳೂರಿನ ನಾಗರಿಕರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ದಿನ ನಿತ್ಯ ಓಡಾಡಲು ರಸ್ತೆ ಗುಂಡಿಗಳಿಂದ ತೊಂದರೆಯಾಗುತ್ತಿದ್ದೂ ನಗರದ ರಸ್ತೆ ಗುಂಡಿಗಳನ್ನ ಮುಚ್ಚದೆ (ಗುಂಡಿಗಳ ಬೆಂಗಳೂರು ಅಥಾರಿಟಿ) ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಗುಂಡಿಗಳಿಗೆ ಕಾಂಗ್ರೆಸ್ ಗಿಡ ನೆಟ್ಟು, ಕಾಂಗ್ರೆಸ್ ಗಿಡದಷ್ಟೇ ಅಪಾಯಕಾರಿ ಕಾಂಗ್ರೆಸ್ ಸರ್ಕಾರ ಎಂದು ವಿಧಾನಪರಿಷತ್ ಸದಸ್ಯರು ಹಾಗೂ ಭರವಸೆಗಳ ಸಮಿತಿ ಅಧ್ಯಕ್ಷರಾದ ಶ್ರೀ ಟಿ. ಎ. ಶರವಣ T.A.Sharavana ರವರ ಸಹಕಾರದೊಂದಿಗೆ ಜೆಡಿಎಸ್ ಯುವ ಮುಖಂಡರಾದ ಶ್ರೀ ಸುಗಮ್ ಗೌಡ್ರು ರವರ ನೇತೃತ್ವದಲ್ಲಿ ಹಾಗೂ ನಿಷ್ಠಾವಂತ ಕಾರ್ಯಕರ್ತರುಗಳೊಂದಿಗೆ, ಸರ್ಕಾರ ಶೀಘ್ರವೇ ನಗರ ರಸ್ತೆಗಳಲ್ಲಿ ಇರುವ ಮಾರಕಗುಂಡಿಗಳನ್ನ ಮುಚ್ಚಲು ಕಾರ್ಯ ನಿರ್ವಹಿಸಬೇಕು ಎಂದು ಆಕ್ರೋಶ ಹೊರಹಾಕಿದರು
DK Shivakumar Siddaramaiah Nikhil Gowda H D Devegowda Bangalore City JDS Janatadal Secular H D Kumaraswamy JDS ITWing Kumaraswamy for CM Janata Dal Secular Jds Karunadu T N Javarayi Gowda
Click here to claim your Sponsored Listing.
Website
Address
No. 19/1, JP Bhavan, Platform Road, Sheshadripuram
Banglore
560020
Opening Hours
| Monday | 11am - 6pm |
| Tuesday | 11am - 6pm |
| Wednesday | 11am - 6pm |
| Thursday | 11am - 6pm |
| Friday | 11am - 6pm |
| Saturday | 11am - 6pm |