Swasthya.Way2Health

Swasthya.Way2Health

Share

30/03/2023

ನೀವು ಒಳ್ಳೆಯವರು, ಆದರೂ ಏಕೆ ನಿಮಗೆ ಖಾಯಿಲೆಗಳು ಬರುತ್ತವೆ?

ನನ್ನಮ್ಮ ಇದೇ ರೀತಿಯ ಇನ್ನೊಂದು ಪ್ರಶ್ನೆಯನ್ನು ನನಗೆ ಆಗಾಗ ಕೇಳುತ್ತಿರುತ್ತಾರೆ.

'ಒಳ್ಳೆಯವರಿಗೇ ಏಕೆ ಕಷ್ಟಗಳು ಹೆಚ್ಚು ಬರುತ್ತವೆ' ಎಂದು.

ಇದೇ ರೀತಿಯ ಹಲವಾರು ಪ್ರಶ್ನೆಗಳು ನಿಮ್ಮಲ್ಲೂ ಇರಬಹುದು, ಅಲ್ಲವೇ?

ಖಾಯಿಲೆಗಳಾಗಲಿ, ಕಷ್ಟಗಳಾಗಲಲಿ ಒಳ್ಳೆಯತನಕ್ಕೆ ಸಂಬಂಧಪಟ್ಟಿದ್ದಲ್ಲ!
ಅರಿವು, ವಿವೇಚನೆ, ಬುದ್ದಿವಂತಿಕೆಗೆ ಸಂಬಂಧಪಟ್ಟಿದ್ದು.

ಇಲ್ಲಿ ಆರೋಗ್ಯ, ಸ್ವಾಸ್ಥ್ಯ ಹಾಗೂ ರೋಗಗಳು ಏಕೆ ಬರುತ್ತವೆ ಎನ್ನುವುದರ ಕುರಿತು ಒಂದೆರಡು ಪ್ರಮುಖ ಅಂಶದ ಕುರಿತು ಹೇಳಬಯಸುತ್ತೇನೆ.

ಖಾಯಿಲೆಗಳು, ಮೆಡಿಸಿನ್ ಗಳು, ದೊಡ್ಡ ದೊಡ್ಡ ಆಸ್ಪತ್ರೆ, ಅದನ್ನು ಮೀರಿಸುವ ಬಿಲ್ಲುಗಳು, ನಾವೇ ಬೆಸ್ಟು ಎಂದು ಡಂಗುರ ಸಾರುವ ಹೆಲ್ತ್ ಕೇರ್ ಬ್ರಾಂಡ್ ಗಳು, ಸಪ್ಲಿಮೆಂಟ್ಸ್, ಚಿಕಿತ್ಸಾ ಪದ್ದತಿಗಳು ನನ್ನಲ್ಲೂ ಬಹಳಷ್ಟು ಗೊಂದಲಗಳನ್ನು ಹುಟ್ಟು ಹಾಕಿದ್ದವು. ಸೂಕ್ತ, ಸಮಾಧಾನಕರ ಉತ್ತರ ಕಂಡುಕೊಳ್ಳಲು ವರ್ಷಾನುಗಟ್ಟಲೆ ನಾನು ಪರದಾಡಿದ್ದಿದೆ.

ಸುಮಾರು 25 ವರ್ಷಗಳ ಹಿಂದೆ ಸಜ್ಜನ, ಪ್ರಾಮಾಣಿಕ, ಕರ್ತವ್ಯನಿಷ್ಠ ಉದ್ಯೋಗಿ, ಪರೋಪಕಾರಿ, ದುಶ್ಚಟದ ಸೋಂಕೂ ಇಲ್ಲದ ನನ್ನ ತಂದೆ ಒಂದಷ್ಟು ತೀವ್ರತರ ಮಾನಸಿಕ ಹಾಗೂ ದೈಹಿಕ ಖಾಯಿಲೆಗಳಿಗೆ ತುತ್ತಾದರು. ಏನೇ ಚಿಕಿತ್ಸೆ, ಔಷದೋಪಚಾರ ಮಾಡಿದರೂ ಮತ್ತೆಂದೂ ಅವರು ಸಹಜ ಸ್ಥಿತಿಗೆ ಬರಲಿಲ್ಲ.

2009 ರ ವರ್ಷದಲ್ಲಿ ನಾನು ಸಹಜ ಆರೋಗ್ಯದ ಗುಟ್ಟು ತಿಳಿದುಕೊಳ್ಳುವ ಜಿಜ್ಞಾಸೆಗೆ ಬಿದ್ದು ಬೆಂಗಳೂರಿನಿಂದ-ಪಾಂಡಿಚೇರಿ ವರೆಗೂ ಸಂಶೋಧನಾ ಪ್ರವಾಸ ಕೈಗೊಂಡು ಹತ್ತು-ಹಲವು ಡಾಕ್ಟರ್ಸ್, ವೈದ್ಯ ಪದ್ಧತಿ, ಚಿಕಿತ್ಸಾ ಪದ್ದತಿಗಳು, ಆರೋಗ್ಯಧಾಮಗಳು, ಅವುಗಳಿಗೆ ಹೊಂದಿಕೊಂಡಂತೆ ಇರುವ ನಂಬಿಕೆಗಳು, ಆಚರಣೆಗಳು, ಜೀವ ವಿಜ್ಞಾನಗಳು, ಸಿದ್ದಿ ಪುರುಷರು, ಮೇಧಾವಿಗಳು, ವೈದ್ಯಕೀಯ ಕಾಲೇಜುಗಳು, ಅವುಗಳ ಸರ್ಟಿಫಿಕೇಟುಗಳನ್ನು ಮೀರಿಸುವ ವಿದ್ವತ್ತು ಉಳ್ಳ ದೊಡ್ಡ ದೊಡ್ಡ ವ್ಯಕ್ತಿತ್ವಗಳ ಸಂಪರ್ಕವಾಯಿತು, ಎಷ್ಟೊಂದು ರೂಢಿಗತ ಅಜ್ಞಾನಗಳು, ಮೌಢ್ಯಗಳ, ಆಚರಣೆಗಳ ವಿಷಯಗಳಲ್ಲಿ ಬೆಳಕು ಮೂಡಿಸುವಂತಹ ವಿಚಾರಗಳು ಈ ಸಂದರ್ಭದಲ್ಲಿ ನನ್ನ ಅರಿವಿಗೆ ಬಂದವು.

ಇದೇ ಸಮಯದಲ್ಲಿ ನನ್ನ ತಂದೆಯ ಆರೋಗ್ಯ ತುಂಬಾನೇ ಬಿಗಡಾಯಿಸಿತ್ತು, ಹಾಸಿಗೆ ಬಿಟ್ಟು ಮೇಲೆ ಏಳುವಂತಿರಲಿಲ್ಲ.
ವೈದ್ಯರು, ಆಸ್ಪತ್ರೆಗಳು ಅಸಹಾಯಕತೆಯಿಂದ ಕೈ ಚೆಲ್ಲಿದ್ದವು.
ನನ್ನ ಪ್ರವಾಸದ ಸಮಯದಲ್ಲಿ ಸಿದ್ಧ ಹಾಗೂ ಆಯುರ್ವೇದ ಪದ್ದತಿಯಲ್ಲಿ ಪರಿಣಿತರು, ಸರ್ಜರಿ ತಜ್ಞರೂ ಆಗಿದ್ದ ಡಾ. ಕಾರ್ತಿಕೇಯನ್ ನನ್ನ ಸ್ನೇಹಿತರೊಬ್ಬರ ಮೂಲಕ ಪರಿಚಯವಾಗಿದ್ದರು. ಅವರಿಗೆ ನನ್ನ ತಂದೆಯ ಅನಾರೋಗ್ಯದ ವಿಚಾರ ತಿಳಿಸಿ ಸಹಾಯ ಕೇಳಿ ಒಮ್ಮೆ ಬಂದು ತಪಾಸಣೆ ಮಾಡಲು ಮನವಿ ಮಾಡಿಕೊಂಡೆ.

ಕೂಡಲೇ ಸ್ಪಂದಿಸಿ ಬಂದ ಡಾ. ಕಾರ್ತಿಕೇಯನ್ ನನ್ನ ತಂದೆಯ ಎಡಗೈ ನಾಡಿ ಪರೀಕ್ಷಿಸಿ 'ಚಿಂತೆ ಬೇಡ, ಮೂರು ತಿಂಗಳಲ್ಲಿ ಸಂಪೂರ್ಣ ಗುಣಮುಖರಾಗುತ್ತಾರೆ' ಎಂದು ಅದೇನು ದೊಡ್ಡ ವಿಷಯವಲ್ಲ ಎಂಬಂತೆ ಹೇಳಿದರು. ನಂತರ ಅವರು ಹೇಳಿದ ಸಮಯಕ್ಕಿಂತ ಅತೀ ಕಡಿಮೆ ಸಮಯದಲ್ಲಿ ಚೇತರಿಕೊಂಡರು. ಅಷ್ಟರಲ್ಲಾಗಲೇ ಬಹಳ ಕೃಶರಾಗಿದ್ದ ಅವರು ಅಲ್ಲಿಂದ ಒಂದಷ್ಟು ತಿಂಗಳು ನಮ್ಮೊಡನಿದ್ದು ದೇಹಾಂತ್ಯವಾದರು.

ಈ ಘಟನೆಯ ನಂತರ ಔಷಧಿಗಳು, ದುಬಾರಿ ಚಿಕಿತ್ಸೆ, ಆಸ್ಪತ್ರೆಗಳು, ಪದವಿಗಳನ್ನು ಮೀರಿದ ಜೀವ ವಿಜ್ಞಾನದ ಮಹತ್ವ ಸ್ವತಃ ನನ್ನ ಅನುಭವಕ್ಕೆ ಬಂದಿತ್ತು.

ಇಷ್ಟರ ನಡುವೆಯೂ ನಮಗೆ ಖಾಯಿಲೆಗಳು ಬರಲು ಮೂಲ ಕಾರಣವೇನು?
ಸ್ವಾಭಾವಿಕ ಹಾಗೂ ನೈಸರ್ಗಿಕವಾಗಿ ಗುಣಪಡಿಸುವ ವಿಧಾನಗಳೇನು? ಎಂಬ ಪ್ರಮುಖ, ಮೂಲಭೂತ ಪ್ರಶ್ನೆಗಳಿಗೆ , ಡಾ. ಬಿ ಎಂ ಹೆಗ್ಡೆ, ಡಾ. ಖಾದರ್ಡಾ, ಡಾ. ಬಿಸ್ವರೂಪ್ ರಾಯ್ ಚೌಧುರಿಯಂತವರು ಸಂಪರ್ಕಕ್ಕೆ ಬಂದ ನಂತರ ಒಂದಷ್ಟು ವಿಜ್ಞಾನಿಕ, ತರ್ಕಕ್ಕೆ ಸಿಗುವ ಸಮಾಧಾನಕರ ಉತ್ತರ ಸಿಕ್ಕಿದ್ದು.

ಡಾ. ಬಿಸ್ವರೂಪ್ ಎಲ್ಲಿ ವೈದ್ಯರ ಕೆಲಸ ಮುಗಿಯುತ್ತದೆಯೋ ಅಲ್ಲಿಂದ ನನ್ನ ಕೆಲಸ ಆರಂಭವಾಗುತ್ತದೆ. ಯಾಕೆಂದರೆ, ವೈದ್ರು, ಅಸ್ಸ್ಪತ್ರೆಗಳು ಇನ್ನು ನಮ್ಮಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ ತುಂಬಾ ನಿರ್ಣಾಯಕ ರೋಗಿಗಳನ್ನೇ ಹೆಚ್ಚು ಅವರು ಗುಣಪಡಿಸಿರುವುದು.
ಹಾಗೆಯೇ ಮುಂದುವರಿದು, ಔಷಧಿಗಳು, ಇಂಜೆಕ್ಷನ್ ಗಳನ್ನು ನಿಲ್ಲಿಸಿದ ನಂತರವೇ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಲು ಸಾಧ್ಯವಾಗುವುದು ಎಂದು ಸಂಶೋಧನೆ, ಆಧಾರಗಳ ಸಮೇತ ಖಚಿತವಾಗಿ ಹಾಗೂ ಸ್ಪಷ್ಟವಾಗಿ ಹೇಳುತ್ತಾರೆ.
ಔಷಧಿಗಳನ್ನು ತೆಗೆದುಕೊಂಡು ಗುಣಮುಖರಾದ ಒಂದೇ ಒಂದು ಉದಾಹರಣೆ ಇಡೀ ಪ್ರಪಂಚದಲ್ಲಿ ಸಿಗಲಾರದು ಎಂದು ತಮ್ಮ ಸಂಶೋಧನೆಗಳನ್ನು ಮುಂದಿಟ್ಟುಕೊಂಡು ಹೇಳುತ್ತಾರೆ!

ನಮ್ಮ ದೇಹ ಪ್ರಪಂಚದ ಅತ್ಯಂತ ಬುದ್ದಿವಂತ ಯಂತ್ರ. ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವ ಎಲ್ಲಾ ಬುದ್ದಿವಂತಿಕೆ ಅದಕ್ಕಿದೆ. ನಾವು ಔಷಧಿಗಳ ರೂಪದಲ್ಲಿ ತೇಗುಕೊಳ್ಳುವ ಕೆಮಿಕಲ್ ಗಳಿಂದ ಹೊರಗಿನಿಂದ ದಾಳಿ ಮಾಡದೆ, ತನ್ನನ್ನು ತಾನು ಗುಣಪಡಿಸಿಕೊಳ್ಳುವ ವಾತಾವರ ಕಲ್ಪಿಸಿಕೊಡುವುದಷ್ಟೇ ನಮ್ಮ ಜವಾಬ್ದಾರಿ.

ಚಿಕಿತ್ಸಾ ಚಕ್ರ ( Cure cycle for disease), ಅಂದರೆ ಬದಲಾದ ವಾತಾವರ, ಉಷ್ಣಾಂಶ, ಪ್ರಕೃತಿ ಏರುಪೇರುಗಳಾದಾಗ 3-7 ದಿನಗಳ ಒಳಗೆ ತನ್ನನ್ನು ತಾನು ಗುಣಪಡಿಸಿಕೊಳ್ಳುವ ಬುದ್ದಿವಂತಿಕೆ ಮತ್ತು ಸಾಮರ್ಥ್ಯ ನಮ್ಮ ದೇಹಕ್ಕೇ ಇರುತ್ತದೆ. ಕೆಲವು ಅತೀ ವಿಶೇಷ ಸಂದರ್ಭಗಳನ್ನು ಒರತುಪಡಿಸಿ.
ಮನುಷ್ಯ ನಿರ್ಮಿತ ಯಾವ ವಿಧಾನ, ಪದ್ಧತಿ, ಕ್ರಮ, ತಂತ್ರವೂ ಪ್ರಕೃತಿ ದತ್ತವಾಗಿ ಬಂದ ನಮ್ಮ ದೇಹದ ಬುದ್ದಿವಂತಿಕೆಗೆ ಸಮವಾಗಲಾರದು.
ಇದನ್ನು ಅರ್ಥ ಮಾಡಿಕೊಳ್ಳುವುದರಲ್ಲೇ ಮನುಷ್ಯನ ಬುದ್ದಿವಂತಿಕೆಯಿರುವುದು.

ಇನ್ನು ಮೂಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಕಡೆ ಗಮನ ಹರಿಸೋಣ.

ನಮ್ಮ ಎಲ್ಲ ಖಾಯಿಲೆಗಳು, ರೋಗಗಳಿಗೆ ಮೂಲ ಕಾರಣ ಪ್ರಕೃತಿಗೆ ವಿರುದ್ಧವಾದ ನಮ್ಮ ಜೀವನ ಹಾಗೂ ಆಹಾರ ಕ್ರಮ!
ಪ್ರಕೃತಿಗೂ ನಮಗೂ ನೇರ ಸಂಪರ್ಕವಿದೆ. ಇಲ್ಲ ಎನ್ನುವವರು ಗಟ್ಟಿಯಾಗಿ ಮೂಗು ಹಿಡಿದು ಒಂದಷ್ಟು ಕ್ಷಣಗಳು ಕಳೆಯುವಷ್ಟರಲ್ಲಿ ತನಗೂ ಆಮ್ಲಜನಕ ನೀಡುವ ಗಿಡ-ಮರಕ್ಕೂ ಇರುವ ಸಂಬಂಧ ಅರಿವಿಗೆ ಬಂದುಬಿಡುತ್ತದೆ.

ನೀವು ಮಣ್ಣಿನ ನೇರ ಸಂಪರ್ಕಕ್ಕೆ ಬಂದು ಎಷ್ಟು ತಿಂಗಳಾದವು?
ಒಂದಷ್ಟು ನಿಮಿಷಗಳು ಸೂರ್ಯನ ಬೆಳಕಿಗೆ ಒಡ್ಡಿಕೊಂಡು ದಿನಗಳಾದವು?
ಪ್ರಕೃತಿದತ್ತವಾದ ನೀರನ್ನು ಕುಡಿದು ಎಷ್ಟು ಸಮಯವಾಯಿತು?
ತಿಂಗಳಿಗೊಂದು ದಿನ ಉಪವಾಸ ಮಾಡಿ ಎಷ್ಟು ವರ್ಷಗಳಾದವು?
ಸೂರ್ಯಾ ಮುಳುಗಿದ ನಂತರ ಊಟದ ರೂಪದಲ್ಲಿ ಏನನ್ನೂ ತಿನ್ನದೇ ಇದ್ದು ಎಷ್ಟು ವರ್ಷಗಳಾದವು?
ಕುಟುಂಬ, ಸ್ನೇಹಿತರು, ಬಂದು-ಬಳಗದೊಟ್ಟಿಗೆ ಒಂದು ಸುದೀರ್ಘ ವಾಕ್ ಮಾಡಿ, ಒಂದು ಬೆಟ್ಟ ಹತ್ತಿದ್ದು, ಪ್ರಕೃತಿ ನಡುವೆ ಸಮಯ ಕಳೆದು ಎಷ್ಟು ದಿನಗಳಾದವು?
ನಿಮ್ಮ ಆಹಾರ ಕ್ರಮ ಏನೇ ಇರಲಿ, ನೀವು ಪ್ರತೀ ದಿನ ತಿನ್ನುವ ಆಹಾರದಲ್ಲಿ ಹಣ್ಣುಗಳು, ಹಸಿ ತರಕಾರಿ, ಸೊಪ್ಪು, ಮೊಳಕೆ ಕಾಳುಗಳು ಶೇ 50 ಕ್ಕೂ ಪ್ರಮಾಣದಲ್ಲಿ ತಿನ್ನುವ ಪದ್ಧತಿ ಬಿಟ್ಟು ಎಷ್ಟು ದಿನಗಳಾದವು?
ನಿಮಗೆ ಖುಷಿ, ಸಂತೋಷ, ನೆಮ್ಮದಿ ಕೊಡುವಂತಹ ಕೆಲಸಗಳನ್ನು ಮೂಲೆಗೆ ತಳ್ಳಿ ಎಷ್ಟು ದಿನಗಳಾದವು?

ಇಂತಹ ಇನ್ನೂ ಹತ್ತು ಹಲವು ಪ್ರಶ್ನೆಗಳನ್ನು ನಿಮ್ಮನ್ನು ನೀವೇ ಕೇಳಿಕೊಂಡು ಉತ್ತರ ಪಡೆದುಕೊಳ್ಳಲು ಪ್ರಯತ್ನಿಸಿ.
ನಿಮ್ಮ ಒಳ್ಳೆಯತನಕ್ಕೂ ಆರೋಗ್ಯಕ್ಕೂ ಇರುವ ಸಂಬಂಧ ನಿಮಗೇ ಗೋಚರವಾಗುತ್ತದೆ.

ಮುಂದಿನ ದಿನಗಳಲ್ಲಿ ಮೆಡಿಸಿನ್ ಮಾಫಿಯ ಬೆಳಕಿಗೆ ತರಲು ಇಚ್ಛಿಸದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಆಧಾರಿತ, ಅಡ್ಡ ಪರಿಣಾಮಗಳಿಲ್ಲದ ಸರಳ ಹಾಗೂ ನೈಸರ್ಗಿಕ ಅರೋಗ್ಯ ಕುರಿತಾದ ಮಾಹಿತಿಯನ್ನು ಸರಣಿ ಲೇಖನಗಳಲ್ಲಿ ವಿವರಿಸುತ್ತೇನೆ.

ಕಾರಂಜಿ ಶ್ರೀಧರ್

ಹೆಲ್ತ್ ಅಂಡ್ ವೆಲ್ನೆಸ್ ಕೋಚ್

Email: [email protected]

26/01/2023
Want your business to be the top-listed Health & Beauty Business in Bangalore?
Click here to claim your Sponsored Listing.

Address


Bangalore
560079