Havyam

Havyam

Share

31/12/2021

ಶೃಂಗೇರಿ ರತ್ನ ಸಂಪುಟ - ಐದು ಸಂಪುಟಗಳು
ಪುಸ್ತಕ ಬೆಲೆ 3375/-
Free shipping
Call on 9008025075

12/11/2021

ಸತ್ವಗುಣದ ಮಹಿಮೆ....
::::::::::--------:::::::::-------:::::
ಭಗವಂತನ ಅಧೀನವಾದ ಮಾಯೆಯಿಂದ ಸತ್ವ-ರಜಸ್ಸು-ತಮಸ್ಸು ಎಂಬ ಮೂರು ಗುಣಗಳು ಹುಟ್ಟುತ್ತವೆ. ಈ ಮೂರು ಗುಣಗಳೂ ಪ್ರತಿಯೊಬ್ಬ ಪ್ರಾಣಿಯನ್ನೂ ಬಂಧಿಸುತ್ತಿವೆ.
ಸತ್ವಗುಣವು ನಿರ್ಮಲವಾಗಿದ್ದು ಪ್ರಕಾಶವಾಗಿಯೂ ದೋಷರಹಿತವಾಗಿಯೂ ಇರುತ್ತದೆ. ಇದರಿಂದ ಜ್ಞಾನವೂ ಸುಖವೂ ಉಂಟಾಗುತ್ತದೆ. ನಾನು ಸುಖವಾಗಿದ್ದೇನೆ ನನಗೆ ಇದು ಚೆನ್ನಾಗಿದೆ ಎಂದು ಸತ್ವಗುಣ ದಲ್ಲಿ ಮೋಹವನ್ನು ಉಂಟುಮಾಡಿ ಬಂಧಿಸುತ್ತದೆ. ಶಾಸ್ತ್ರ ವಿಹಿತವಾದ ಕರ್ಮಗಳನ್ನು ಆಚರಿಸುವಂತೆ ಮಾಡುತ್ತದೆ. ಇಂತಹವರನ್ನು ಸಾತ್ವಿಕರು ಎಂತಲೂ ಕರೆಯುತ್ತಾರೆ ಇಂತಹ ಸತ್ವಗುಣದಲ್ಲಿ ದೇಹತ್ಯಾಗ ಮಾಡಿದರೆ ದೇವತಾದಿ ಉತ್ತಮ ಜನ್ಮಗಳನ್ನು ಪಡೆಯುತ್ತಾರೆ. ಆದರೆ ಇದೂ ಜನ್ಮವಲ್ಲವೇ, ಜನ್ಮವೇ ದುಃಖವಲ್ಲವೇ. ಆದ್ದರಿಂದ ಸತ್ವಗುಣವೂ ಸಹ ನಮ್ಮನ್ನು ಬಂಧಿಸುತ್ತದೆ.ರಜೋಗುಣವು ರಾಗತ್ಮಕವಾಗಿರುತ್ತದೆ. ಎಂದರೆ ಬಯಕೆಗಳನ್ನು ಉಂಟುಮಾಡುವಂತದ್ದು. ಇಲ್ಲದ ವಸ್ತುಗಳ ಬಗ್ಗೆ ಆಶೆ, ಇರುವ ವಸ್ತುಗಳಲ್ಲಿ ಆಸಕ್ತಿ. ಇದನ್ನು ತೃಷ್ಣೆ, ಆಸಂಗ ಎನ್ನುವರು. ಲೋಭವನ್ನೂ ಪ್ರವೃತ್ತಿಯನ್ನೂ ಈ ರಜೋಗುಣವು ಉಂಟುಮಾಡುತ್ತಿದೆ. ಇದು ನಮ್ಮನ್ನು ಕೆಟ್ಟ ಕರ್ಮಗಳಲ್ಲಿಯೂ ತೊಡಗಿಸುತ್ತದೆ. ಈ ಲೋಕದ ಪರರ ಭೋಗಭಾಗ್ಯಗಳನ್ನೂ ಬಯಸುವಂತೆ ಮಾಡುತ್ತದೆ. ಹೆಚ್ಚು ಹೆಚ್ಚಿನ ಬಯಕೆಗಳನ್ನು ಬಯಸುತ್ತಾ, ದುರಾಸೆಯನ್ನು ಬೆಳೆಸುತ್ತಾ ಅದಕ್ಕಾಗಿ ಅನೇಕ ಕೆಟ್ಟ ಕರ್ಮಗಳನ್ನೂ ಮಾಡುವಂತೆ ಪ್ರೇರೇಪಿಸುತ್ತದೆ. ಈ ಕರ್ಮಗಳು ಪಾಪಗಳನ್ನು ತಂದೊಡ್ಡುತ್ತವೆ. ಇದರಿಂದ ಕೆಟ್ಟ ಜನ್ಮಗಳು ಪ್ರಾಪ್ತವಾಗುತ್ತವೆ. ಒಟ್ಟಿನಲ್ಲಿ ರಜೋಗುಣವೂ ಸಹ ನಮ್ಮನ್ನು ಬಂಧಿಸುತ್ತದೆ. ಈ ರಜೋಗುಣದಲ್ಲಿ ದೇಹತ್ಯಾಗ ಮಾಡಿದರೆ ಮಾನವ ಜನ್ಮವು ಬರುತ್ತದೆ.

"ಮೂರು ರೀತಿಯ ಜನ್ಮಗಳು"
------------------------------------------

ಭಗವಂತನ ಸೃಷ್ಟಿಯಲ್ಲಿ ಮೂರು ಗುಣಗಳಿವೆ. ಸತ್ವ ರಜಸ್ಸು ಮತ್ತು ತಮಸ್ಸು ಎಂದು. ಈ ಮೂರು ಗುಣಗಳು ನಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ಮುಂದಿನ ಜನ್ಮ ಗಳಿಗೂ ಅತ್ಯಂತ ಹೆಚ್ಚಿನ ಪಾತ್ರವಹಿಸುತ್ತದೆ ಈ ಗುಣಗಳು.
ಸತ್ವಗುಣ ಸಂಪನ್ನನಾಗಿರುವಾಗ ಈ ದೇಹವನ್ನು ತ್ಯಾಗ ಮಾಡಿದರೆ (ಸತ್ತರೆ)ದೇವತಾದಿ ಜನ್ಮಗಳನ್ನು ಪಡೆಯುತ್ತಾರೆ. ರಜೋ ಗುಣದಲ್ಲಿ ದೇಹತ್ಯಾಗ ಮಾಡಿದರೆ ಮಾನವ ಜನ್ಮವನ್ನು ಪಡೆಯುತ್ತಾರೆ.ತಮೋ ಗುಣದಲ್ಲಿ ದೇಹತ್ಯಾಗ ಮಾಡಿದರೆ ಪಶುಪಕ್ಷಿ ಕ್ರಿಮಿಕೀಟ ಜನ್ಮಗಳನ್ನು ಪಡೆಯುತ್ತಾರೆ.
ಒಟ್ಟಿನಲ್ಲಿ ಆತ್ಮಜ್ಞಾನವಿಲ್ಲದ "ಅಜ್ಞಾನಿಗಳಿಗೆ" ಮೂರು ರೀತಿಯ ಜನ್ಮಗಳು ಕಟ್ಟಿಟ್ಟಬುತ್ತಿ.
ಆತ್ಮಜ್ಞಾನಿಗೆ ಜನ್ಮಾಂತರವಿಲ್ಲ.ತಮೋಗುಣವು ಅಜ್ಞಾನದಿಂದ ಹುಟ್ಟಿ ಎಲ್ಲರನ್ನೂ ಮೋಹಗೊಳಿಸುತ್ತದೆ. ಸರಿಯಾದ ತಿಳುವಳಿಕೆ ಇಲ್ಲದಂತೆ ಮಾಡುತ್ತದೆ. ಸೋಮಾರಿತನ ನಿದ್ರೆ ಇವುಗಳನ್ನು ತಂದೊಡ್ಡುತ್ತದೆ. ಮಾಡಬೇಕಾದ ಕೆಲಸಗಳನ್ನು ಮಾಡಿಸದೆ ಪ್ರಮಾದವನ್ನು ಉಂಟುಮಾಡುತ್ತದೆ. ತಪ್ಪಾಗಿ ತಿಳಿದುಕೊಂಡು ತಪ್ಪಾದ ಕೆಲಸಗಳನ್ನು ಮಾಡುವಂತೆ ಮಾಡುತ್ತದೆ. ಅಜ್ಞಾನವೇ ಇದರ ಹೆಚ್ಚಿನ ಫಲ. ಅಜ್ಞಾನದಿಂದ ಅತ್ಯಂತ ಪಾಪಕರ್ಮಗಳನ್ನು ಮಾಡುವಂತೆ ಮಾಡುತ್ತದೆ. ತಮೋಗುಣವಿರುವಾಗ ದೇಹತ್ಯಾಗ ಮಾಡಿದಲ್ಲಿ ಪಶುಪಕ್ಷಿ ಕ್ರಿಮಿಕೀಟ ಮೊದಲಾದ ಕೀಳು ಜನ್ಮ ಗಳಾಗುತ್ತವೆ.
ಇಂತಹ ಅನರ್ಥಕಾರಿಯಾದ ಈ ತಮೋಗುಣವನ್ನು ನಾವು ಎಚ್ಚರಿಕೆಯಿಂದ ಜಯಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.ಒಟ್ಟಿನಲ್ಲಿ ತಮೋಗುಣವೂ ಬಂಧಕವೇ.

12/11/2021

ನಾವು ಬೇರೆಯವರ ದೃಷ್ಟಿಯಲ್ಲಿ ಕೆಟ್ಟವರಾಗಲು ಅವರಿಗೆ ಕೆಡಕು ಮಾಡಬೇಕೆಂದಿಲ್ಲಾ.....
ಅವರು ಮಾಡುವ ತಪ್ಪು ಗಳನ್ನು ಹೇಳಿದರೂ ಸಾಕು..... ಕೆಟ್ಟವರಾಗುತ್ತೇವೆ...

Want your place of worship to be the top-listed Place Of Worship in Mysore?
Click here to claim your Sponsored Listing.

Website

Address

Mysore
570001